ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್ ಹಾಕಿ: ಒಂದೇ ಗುಂಪಿನಲ್ಲಿ ಭಾರತ, ಪಾಕ್

Published 8 ಆಗಸ್ಟ್ 2023, 14:20 IST
Last Updated 8 ಆಗಸ್ಟ್ 2023, 14:20 IST
ಅಕ್ಷರ ಗಾತ್ರ

ನವದೆಹಲಿ: ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡಗಳು ಏಷ್ಯನ್ ಕ್ರೀಡಾಕೂಟದ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಮಂಗಳವಾರ ಗುಂಪುಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಪುರ ಮತ್ತು ಉಜ್ಭೇಕಿಸ್ತಾನ ತಂಡಗಳು ಇವೆ.

ಬಿ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಮಲೇಷ್ಯಾ, ಚೀನಾ, ಓಮನ್, ಥಾಯ್ಲೆಂಡ್ ಮತ್ತು ಇಂಡೊನೇಷ್ಯಾ ತಂಡಗಳು ಆಡಲಿವೆ.

ಸೆ.24ರಂದು ಹಾಕಿ ಪಂದ್ಯಗಳು ಆರಂಭವಾಗಲಿವೆ.

ಭಾರತ ಮಹಿಳಾ ತಂಡವು ಸೆಪ್ಟೆಂಬರ್ 27ರಂದು ಸಿಂಗಪುರದ ಎದುರು ಅಭಿಯಾನ ಆರಂಭಿಸಲಿದೆ. ಮಹಿಳಾ ತಂಡವು 2018ರಲ್ಲಿ ಜಕಾರ್ತ್‌ದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಬಿ ಗುಂಪಿನಲ್ಲಿ ಜಪಾನ್, ಚೀನಾ, ಥಾಯ್ಲೆಂಡ್, ಕಜಕಸ್ತಾನ ಹಾಗೂ ಇಂಡೊನೇಷ್ಯಾ ತಂಡಗಳು ಆಡಲಿವೆ.

‘ಬಲಿಷ್ಠ ತಂಡಗಳಿರುವ ಗುಂಪಿನಲ್ಲಿ ಸ್ಥಾನ ಪಡೆದಿದ್ದೇವೆ. ಆದರೆ, ಈ ಸವಾಲನ್ನು ಗೆದ್ದು ಬರುವ ಆತ್ಮವಿಶ್ವಾಸ ನಮಗಿದೆ. ಅದಕ್ಕೆ ತಕ್ಕಂತೆ ಬಹಳಷ್ಟು ಪರಿಶ್ರಮದಿಂದ ಅಭ್ಯಾಸ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ತಾಲೀಮು ನಡೆಸುತ್ತಿದ್ದೇವೆ’ ಎಂದು ಭಾರತ ಮಹಿಳಾ ತಂಡದ ನಾಯಕಿ ಸವಿತಾ ಹೇಳಿದ್ದಾರೆ.

ಎಲ್ಲ ಹಾಕಿ ಪಂದ್ಯಗಳೂ  ಗಾಂಗ್ಷು ಕೆನಲ್ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಪುರುಷರ ವಿಭಾಗದ ಫೈನಲ್ ಅಕ್ಟೋಬರ್ 6ಕ್ಕೆ ನಡೆಯಲಿದೆ. ಅದರ ಮರುದಿನ ಮಹಿಳಾ ಫೈನಲ್ ಆಯೋಜನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT