ಶಾಂಘೈ (ಪಿಟಿಐ): ಭಾರತ ಪುರುಷರ ಮತ್ತು ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡಗಳು ಬುಧವಾರ ಅಧಿಕಾರಯುತ ಪ್ರದರ್ಶನ ನೀಡಿ ವಿಶ್ವ ಕಪ್ ಸ್ಟೇಜ್ 2 ಟೂರ್ನಿಯ ಫೈನಲ್ ತಲುಪಿದವು. ಈ ಪ್ರತಿಷ್ಠಿತ ಕೂಟದಲ್ಲಿ ಆ ಮೂಲಕ ಭಾರತಕ್ಕೆ ಎರಡು ಪದಕಗಳು ಖಾತರಿಯಾದವು.

ಓಜಸ್ ದೇವತಳೆ, ಅಭಿಷೇಕ್ ವರ್ಮಾ ಮತ್ತು ರಿಷಭ್ ಯಾದವ್ ಅವರನ್ನು ಒಳಗೊಂಡ ಅಗ್ರ ಕ್ರಮಾಂಕದ ಭಾರತ ತಂಡ ಕ್ವಾರ್ಟರ್ಫೈನಲ್ನಲ್ಲಿ 239–232 ರಿಂದ ಬ್ರಿಟನ್ ತಂಡವನ್ನು ಸೋಲಿಸಿತು. ನಂತರದ ಪಂದ್ಯದಲ್ಲಿ ಪ್ರಬಲ ಹೋರಾಟ ನಡೆಸಿ 232–231ರಿಂದ ಡೆನ್ಮಾರ್ಕ್ ತಂಡವನ್ನು ಮಣಿಸಿತು.

ಮಹಿಳೆಯರ ವಿಭಾಗದಲ್ಲೂ ಅಗ್ರ ಶ್ರೇಯಾಂಕದ ಪಡೆದಿದ್ದ ಭಾರತ ತಂಡ (ಮಧುರಾ ಧಾಮಣಗಾಂವಕರ್, ಚಿಕಿತಾ ತನಿಪತ್ರಿ ಮತ್ತು ಜ್ಯೋತಿ ಸುರೇಖಾ ವೆಣ್ಣಂ) ಕ್ವಾರ್ಟರ್ಫೈನಲ್ನಲ್ಲಿ 232–229 ರಿಂದ ಕಜಕಸ್ತಾನ ತಂಡವನ್ನು ಸೋಲಿಸಿತು. ನಂತರ ನಾಲ್ಕರ ಘಟ್ಟದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದ ಬ್ರಿಟನ್ ತಂಡವನ್ನು 232–230 ರಿಂದ ಪರಾಭವಗೊಳಿಸಿತು.

ಪುರುಷರ ಮತ್ತು ಮಹಿಳೆಯರ ವಿಭಾಗದ ಚಿನ್ನದ ಪದಕದ ಪಂದ್ಯಗಳು ಶನಿವಾರ ನಡೆಯಲಿವೆ. ಭಾರತ ತಂಡ ಎರಡೂ ಫೈನಲ್ಗಳಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸದೆ.

ಕಳೆದ ತಿಂಗಳು ಅಮೆರಿಕದ ಅಬರ್ನ್ಡೇಲ್ನಲ್ಲಿ ನಡೆದ ವಿಶ್ವ ಕಪ್ ಸ್ಟೇಜ್ 1 ಕೂಟದಲ್ಲಿ ಭಾರತದ ಕಾಂಪೌಂಡ್ ಮಿಶ್ರ ವಿಭಾಗದ ತಂಡ (ಜ್ಯೋತಿ ಸುರೇಖಾ ವೆಣ್ಣಂ ಮತ್ತು ರಿಷಭ್ ಯಾದವ್) ಚಿನ್ನದ ಪದಕ ಗೆದ್ದಿತ್ತು. ಫೈನಲ್ನಲ್ಲಿ ಚೀನಾ ತೈಪಿಯ ತಂಡವನ್ನು (ಹುವಾಂಗ್ ಐ–ಜೌ ಮತ್ತು ಚೆನ್ ಚಿಯಾ ಲುನ್) ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.