ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ತಂಡಗಳಿಗೆ ಗೆಲುವು

Published 14 ಅಕ್ಟೋಬರ್ 2023, 14:23 IST
Last Updated 14 ಅಕ್ಟೋಬರ್ 2023, 14:23 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಜೂನಿಯರ್‌ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ನೆದರ್ಲೆಂಡ್ಸ್‌ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿವೆ.

ಮಹಿಳೆಯರ ತಂಡದವರು 3–2 ಗೋಲುಗಳಿಂದ ಸೀನಿಯರ್‌ ಇಡಿಇ ತಂಡವನ್ನು ಮಣಿಸಿದರು. ರವೀನಾ, ಕರುಣಾ ಮಿಂಜ್ ಮತ್ತು ಭವ್ಯಾ ಅವರು ಗೋಲು ಗಳಿಸಿ ಗೆಲುವಿಗೆ ಕಾರಣರಾದರು.

ಪುರುಷರ ತಂಡ, ನೆದರ್ಲೆಂಡ್ಸ್‌ ಜೂನಿಯರ್‌ ತಂಡದ ವಿರುದ್ಧ 8–0 ಗೋಲುಗಳಿಂದ ಜಯ ಸಾಧಿಸಿತು. ಅಜೀತ್‌ ಯಾದವ್‌ ಹ್ಯಾಟ್ರಿಕ್‌ ಗೋಲು ಗಳಿಸಿದರೆ, ರೋಹಿತ್‌ ಸಿಂಗ್‌ ಎರಡು ಗೋಲುಗಳನ್ನು ತಂದಿತ್ತರು. ಇತರ ಗೋಲುಗಳನ್ನು ಆಶು ಮೌರ್ಯ, ಶ್ರೀಜನ್‌ ಯಾದವ್‌ ಮತ್ತು ರಾಹುಲ್‌ ರಾಜ್‌ಭರ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT