ಪ್ಯಾರಿಸ್: ಭಾರತದ ಅರುಣಾ ತನ್ವಾರ್ ಅವರು ಪ್ಯಾರಾಲಿಂಪಿಕ್ಸ್‌ನ ಟೇಕ್ವಾಂಡೊ ಮಹಿಳೆಯರ (ಕೆ 44) 47 ಕೆ.ಜಿ ವಿಭಾಗದ 16ನೇ ಸುತ್ತಿನ ಸ್ಪರ್ಧೆಯಲ್ಲಿ 0–19ರಿಂದ ಟರ್ಕಿಯ ನುರ್ಚಿಹಾನ್ ಎಕಿನ್ಸಿ ವಿರುದ್ಧ ಪರಾಭವಗೊಂಡರು.
ಗುರುವಾರ ನಡೆದ ಸ್ಪರ್ಧೆಯಲ್ಲಿ ಟರ್ಕಿಯ ಆಟಗಾರ್ತಿಗೆ ಅರುಣಾ ಯಾವುದೇ ಹಂತದಲ್ಲಿ ಸರಿಸಾಟಿಯಾಗಲಿಲ್ಲ. ಎಕಿನ್ಸಿ ಒಂಬತ್ತು ಬಾರಿ ಬಾಡಿ ಕಿಕ್‌ನಿಂದ ತಲಾ ಎರಡು ಅಂಕಗಳನ್ನು ಗಳಿಸಿದರು. ಅಲ್ಲದೆ, ಅರುಣಾ ಒಂದು ಪೆನಾಲ್ಟಿ ಪಾಯಿಂಟ್ ಅನ್ನೂ ಬಿಟ್ಟುಕೊಟ್ಟರು.
ಟೋಕಿಯೊ ಪ್ಯಾರಾಲಿಂಪಿಕ್ಸ್ ಸಮಯದಲ್ಲಿ ಟೇಕ್ವಾಂಡೊ ಸ್ಪರ್ಧೆಯನ್ನು ಪರಿಚಯಿಸಲಾಯಿತು. ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಐದು ತೂಕದ ಕೆಟಗರಿಯಲ್ಲಿ ಸ್ಪರ್ಧೆ ನಡೆಯುತ್ತದೆ.