ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಜೆ ರಾಜ್ಯ ಜೂನಿಯರ್ ವಾಟರ್‌ ಪೋಲೊ: ಬಿಎಸಿ ತಂಡಗಳಿಗೆ ಪ್ರಶಸ್ತಿ

Published 9 ಜೂನ್ 2024, 14:46 IST
Last Updated 9 ಜೂನ್ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ಬಾಲಕರ ಮತ್ತು ಬಾಲಕಿಯರ ತಂಡಗಳು ಎನ್‌ಆರ್‌ಜೆ ರಾಜ್ಯ ಜೂನಿಯರ್ ವಾಟರ್‌ ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ (ಎನ್‌ಎಸಿ) ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಬಿಎಸಿ ತಂಡವು 9–5ರಿಂದ ಆತಿಥೇಯ ಎನ್‌ಎಸಿ ತಂಡವನ್ನು ಮಣಿಸಿತು. ಸ್ವಿಮ್‌ಲೈಫ್‌ ತಂಡವು ಮೂರನೇ ಸ್ಥಾನ ಪಡೆಯಿತು.

ವಿಜೇತ ಎನ್ಎಸಿ ತಂಡದಲ್ಲಿ ತರುಣ್ ಆರ್, ಧ್ರುವ ಎ, ಸಾಕೇತ್ ಚಂದ್ರ ಡಿ.ಎಂ, ಎಸ್.ಎಸ್ ಅಭಯಸೂರ್ಯ, ಸೂರಜ್ ಆರ್, ರಾಘವ್ ಆರ್, ಅಮೋಘ್ ಪಿ, ಆದಿತ್ಯ ಎ, ತನ್ಮಯ್ ವಿ, ಸೂರ್ಯಚಂದ್ರ ಡಿ.ಎಂ, ದಿಶಾಂತ್ ಎಸ್, ರಿಷಬ್ ಎಂ. ರೆಡ್ಡಿ ಮತ್ತು ಲಾಲನ್ ಎಂ. ಗೌಡ ಇದ್ದರು. ರನ್ನರ್ಸ್ ಅಪ್‌ ಎನ್‌ಎಸಿ ತಂಡದಲ್ಲಿ ಬಿ. ಚಿನ್ಮಯ್ ಪೈ, ವತ್ಸರ್ ಶಾರದಾ, ಇನೇಶ್ ಶೆಣೈ, ಇಶಾನ್ ಶೆಣೈ, ಈರೇಶ್ ಶೆಣೈ, ಸುಹಾಸ್ ಎಸ್, ಕೇದಾರ್ ಸಂತೋಷ್ ಕುಲಕರ್ಣಿ, ಜಶ್ ಕರಿಯಾ, ಆರ್.ಎಲ್. ಹಿಮಾನೀಶ್, ಮಿಥಿಲ್ ಆರ್.ಎ, ಅಧ್ಯಯನ್ ಪಿ. ಶಿರೋಲೆ, ಸುದೀಕ್ಷ್ ದೀಪಕ್ ಮತ್ತು ಧ್ಯಾನ್ ಆರ್. ಇದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲೂ ಬಿಎಸಿ ತಂಡವು 16–3ರಿಂದ ಎನ್‌ಎಸಿ ತಂಡವನ್ನು ಸೋಲಿಸಿತು. ಇಲ್ಲೂ ಸ್ವಿಮ್‌ ಲೈಫ್‌ ತೃತೀಯ ಸ್ಥಾನ ಪಡೆಯಿತು. ಚಾಂಪಿಯನ್‌ ಬಿಎಸಿ ತಂಡದಲ್ಲಿ ತನ್ವಿ ಸಿ.ಎಚ್, ಲಾವಣ್ಯಾ ಯೋಗೇಶ್, ಮಾನ್ಯಾ  ಆರ್, ಇಶಾನಿ ಕಿರಣ್, ದಿಶಾ ಸಂಯುಕ್ತಾ ಜಿ, ಧೃತಿ ಡಿ.ಕೆ, ರೋಷಿನಿ ಎಸ್, ನಿತ್ಯಾ ಸಿ, ಪ್ರಚೇತಾ ಆರ್. ರಾವ್, ಸಿಂಚನಾ ಸಿ.ಪಿ, ನದಿ ಬಸವರಾಜು, ಮೌಲ್ಯಾ ಎಚ್‌ ಮತ್ತು ಜಾಹ್ನವಿ ಎಲ್.ಗೌಡ ಇದ್ದರು. ರನ್ನರ್ಸ್‌ ಅಪ್‌ ಎನ್‌ಎಸಿ ತಂಡದಲ್ಲಿ ಅಕ್ಷಿತಾ ಪಟ್ನಾಯಕ್, ಪ್ರಣವಿ ಆರ್‌. ಠಂಕಿ, ತನ್ವಿ ರವಿ, ರಚನಾ ಜಯಪ್ರಕಾಶ್, ಶಿವಾಲಿ ಮಹೇಶ ಮಹಾಂತ, ಶ್ರೀಜಾ ಮಹಿಷಿ, ಮೋಹಿತಾ ಫಣಿ ತೋಟ, ದಿಯಾ ಶೆಟ್ಟಿ, ಯುಕ್ತಾ ವಿನೋದ್, ಧಾತ್ರಿ ಎಸ್.ಎಚ್, ಸುಮನಾ ಕಾರ್ತಿಕ್, ವಿಭಾ ಎಸ್. ಭಟ್ ಮತ್ತು ವೈಷ್ಣವಿ ಜಿ. ಇದ್ದರು.

ಬಾಲಕರ ವಿಭಾಗದಲ್ಲಿ ಚಿನ್ಮಯ್‌ ಪೈ (ಎನ್‌ಎಸಿ) ಮತ್ತು ಬಾಲಕಿಯರ ವಿಭಾಗದಲ್ಲಿ ರೋಷಿನಿ ಎಸ್‌. (ಬಿಎಸಿ) ಉತ್ತಮ ಆಟಗಾರರಾಗಿ ಹೊರಹೊಮ್ಮಿದರು.

ಉತ್ತಮ ಆಟಗಾರರಾಗಿ ಹೊರಹೊಮ್ಮಿದ ಎನ್‌ಎಸಿಯ ಚಿನ್ಮಯ್‌ ಪೈ (ಬಲ) ಮತ್ತು ಬಿಎಸಿಯ ರೋಷಿನಿ ಎಸ್‌. 
ಉತ್ತಮ ಆಟಗಾರರಾಗಿ ಹೊರಹೊಮ್ಮಿದ ಎನ್‌ಎಸಿಯ ಚಿನ್ಮಯ್‌ ಪೈ (ಬಲ) ಮತ್ತು ಬಿಎಸಿಯ ರೋಷಿನಿ ಎಸ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT