ಬೆಂಗಳೂರು: ಮಹಾರಾಷ್ಟ್ರ ಮತ್ತು ಬರೋಡಾ ತಂಡಗಳು ಇಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದವು.
ಸೆಮಿಫೈನಲ್‌ನ ಎರಡೂ ಪಂದ್ಯಗಳು ಡ್ರಾ ಗೊಂಡವು. ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಹಾರಾಷ್ಟ್ರ ಮತ್ತು ಬರೋಡಾ ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು. ಈ ತಂಡಗಳು ಇದೇ 24ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ತಂಡದ ವಿರುದ್ಧ ಡ್ರಾ ಸಾಧಿಸಿತು. ಮೊದಲು ಇನಿಂಗ್ಸ್‌ನಲ್ಲಿ 260 ರನ್‌ಗಳ ಮುನ್ನಡೆ ಪಡೆದಿದ್ದ ಮಹಾರಾಷ್ಟ್ರ ತಂಡವು ಎರಡನೇ ಇನಿಂಗ್ಸ್‌ನಲ್ಲಿ 123 ಓವರ್‌ಗಳಲ್ಲಿ 7 ವಿಕೆಟ್‌ಗೆ 598 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅರ್ಷಿನ್ ಕುಲಕರ್ಣಿ (150; 144ಎ) ಶತಕ ಗಳಿಸಿ ಸಂಭ್ರಮಿಸಿದರು. ಕೆಎಸ್‌ಸಿಎ ಇಲೆವನ್‌ನ ಅಧೋಕ್ಷ ಹೆಗ್ಡೆ, ಶ್ರೇಯಸ್ ಗೋಪಾಲ್ ಮತ್ತು ಕಿಶನ್ ಎಸ್.ಬೆದರೆ ತಲಾ ಎರಡು ವಿಕೆಟ್ ಪಡೆದರು. ಎರಡನೇ ಇನಿಂಗ್ಸ್‌ನಲ್ಲಿ ಕಾರ್ಯದರ್ಶಿ ಇಲೆವನ್ ತಂಡವು 21 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 101 ರನ್ ಗಳಿಸಿತು.
ಸಂಕ್ತಿಪ್ತ ಸ್ಕೋರ್: ಆಲೂರು (1): ಮಹಾರಾಷ್ಟ್ರ: 114.5 ಓವರ್‌ಗಳಲ್ಲಿ 421. ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 54.2 ಓವರ್‌ಗಳಲ್ಲಿ 161. ಎರಡನೇ ಇನಿಂಗ್ಸ್: ಮಹಾರಾಷ್ಟ್ರ: 123 ಓವರ್‌ಗಳಲ್ಲಿ 7ಕ್ಕೆ 598 ಡಿಕ್ಲೇರ್ (ಅರ್ಷಿನ್ ಕುಲಕರ್ಣಿ 150, ಸಚಿನ್ ದಾಸ್ 51, ನಿಖಿಲ್ ನೈಲ್ 57; ಅಧೋಕ್ಷ ಹೆಗ್ಡೆ 188ಕ್ಕೆ 2, ಶ್ರೇಯಸ್ ಗೋಪಾಲ್ 111ಕ್ಕೆ 2, ಕಿಶನ್ ಎಸ್.ಬೆದರೆ 59ಕ್ಕೆ 2). ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 21 ಓವರ್‌ಗಳಲ್ಲಿ 2ಕ್ಕೆ 101 (ವಿಶಾಲ್ ಓನಾಟ್ ಔಟಾಗದೇ 57) ಫಲಿತಾಂಶ: ಪಂದ್ಯ ಡ್ರಾ
ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 118.1 ಓವರ್‌ಗಳಲ್ಲಿ 325. ಬರೋಡಾ: 127.3 ಓವರ್‌ಗಳಲ್ಲಿ 412. ಎರಡನೇ ಇನಿಂಗ್ಸ್: 46 ಓವರ್‌ಗಳಲ್ಲಿ 7ಕ್ಕೆ 249 ಡಿಕ್ಲೇರ್ (ಶುಭಂ ಶರ್ಮಾ ಔಟಾಗದೇ 91, ಆರ್ಯನ್ ಪಾಂಡೆ 39; ಅತೀತ್ ಸೇಠ್ 35ಕ್ಕೆ 2, ಮಹೇಶ್ ಪಿಥಿಯಾ 77ಕ್ಕೆ 4). ಬರೋಡಾ: 43 ಓವರ್‌ಗಳಲ್ಲಿ 4ಕ್ಕೆ 129 (ಜ್ಯೋತ್ಸ್ನಿಲ್ ಸಿಂಗ್ 34, ಶಿವಾಲಿಕ್ ಶರ್ಮಾ ಔಟಾಗದೇ 71; ಕುಮಾರ್ ಕಾರ್ತಿಕೇಯ 53ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.