ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

Published 25 ಡಿಸೆಂಬರ್ 2023, 3:33 IST
Last Updated 25 ಡಿಸೆಂಬರ್ 2023, 3:33 IST
ಅಕ್ಷರ ಗಾತ್ರ

ಚೆನ್ನೈ: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್‌ ತಂಡ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 33–31ರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು.

ಮಧ್ಯಂತರದಲ್ಲಿ 16–12ರಿಂದ ಮುನ್ನಡೆಯಲ್ಲಿದ್ದ ಬುಲ್ಸ್‌ ತಂಡಕ್ಕೆ ಟೈಟನ್ಸ್‌ ತಂಡ ಪ್ರಬಲ ಪೈಪೋಟಿ ನೀಡಿತು. ಬೆಂಗಳೂರು ತಂಡದ ಪರ ಸುರ್‌ಜಿತ್‌ ಸಿಂಗ್‌ ಟ್ಯಾಕಲ್‌ನಲ್ಲೇ 7 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಭರತ್‌ 6 ಅಂಕ ಗಳಿಸಿದರೆ, ವಿಕಾಶ ಖಂಡೋಲ ಮತ್ತು ನೀರಜ್ ನರ್ವಾಲ್ ತಲಾ ಐದು ಪಾಯಿಂಟ್ಸ್‌ ಪಡೆದರು. ಟೈಟನ್ಸ ಪರ ನಾಯಕ ಪವನ್‌ ಪವನ್ ಸೆಹ್ರಾವತ್ 13 ಅಂಕ ಗಳಿಸಿದರು.

ಆಡಿರುವ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, 19 ಅಂಕಗಳೊಂದಿಗೆ ಬುಲ್ಸ್‌ ಪಾಯಿಂಟ್‌ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದರು.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡವು 39–37ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು. ಬೆಂಗಾಲ್‌ ಪರ ಮಣಿಂದರ್ ಸಿಂಗ್ (11) ಸೂಪರ್‌ 10 ಸಾಧನೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT