ಮಂಗಳೂರು: ಬಿಹಾರದಲ್ಲಿ ನವೆಂಬರ್ 1ರಿಂದ 4ರ ವರಗೆ ನಡೆಯಲಿರುವ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡದ ಆಯ್ಕೆ ಮತ್ತು ತರಬೇತಿ ಶಿಬಿರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.

ಇದೇ 16ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು 17ರಿಂದ 28ರ ವರೆಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಆಯ್ಕೆ ಪ್ರಕ್ರಿಯೆಗೆ ಹಾಜರಾಗುವವರು ಬೆಳಿಗ್ಗೆ 8 ಗಂಟೆಯ ಒಳಗೆ ಸ್ಥಳದಲ್ಲಿ ಹಾಜರಿರಬೇಕು. ಪಾಲ್ಗೊಳ್ಳುವವರ ವಯಸ್ಸು ಮುಂಬರುವ ಸೆಪ್ಟೆಂಬರ್ 4ಕ್ಕೆ ಅನ್ವಯವಾಗುವಂತೆ 20 ವರ್ಷ ದಾಟಿರಬಾರದು ಮತ್ತು ದೇಹತೂಕ 65 ಕೆಜಿ ಒಳಗೆ ಇರಬೇಕು. ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ತರಬೇಕು.

ಮಾಹಿತಿಗೆ ಆಳ್ವಾಸ್ ಕಾಲೇಜಿನ ಮಹಿಳಾ ಕಬಡ್ಡಿ ಕೋಚ್ ಹಂಸ ಸಿ (9916087513) ಅಥವಾ ರತನ್ (9448529625) ಅವರನ್ನು ಸಂಪರ್ಕಿಸಬಹುದು ಎಂದು ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ.ಮಂಜುನಾಥ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.