ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌: ಕಲ್ಪನಾ, ವಿದ್ಯಾ ಜೋಡಿ ಫೈನಲ್‌ಗೆ

ಬೇಸಿಗೆ ಕಾಲದ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌: ಅಂತಿಮ ಸುತ್ತಿಗೆ ವಸಂತಿ ಶಾ, ನಿಕಿತಾ ಕಮಲ್
Published 5 ಜೂನ್ 2024, 16:31 IST
Last Updated 5 ಜೂನ್ 2024, 16:31 IST
ಅಕ್ಷರ ಗಾತ್ರ

ಮಂಗಳೂರು: ಯೂತ್‌ ವಿಶ್ವ ಚಾಂಪಿಯನ್‌ಷಿಪ್‌ನ ಪದಕ ವಿಜೇತ ಜೋಡಿ ಕಲ್ಪನಾ ಗುರ್ಜರ್ ಮತ್ತು ವಿದ್ಯಾ ಪಟೇಲ್ ಇಲ್ಲಿ ನಡೆಯುತ್ತಿರುವ ಬೇಸಿಗೆ ಕಾಲದ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಬುಧವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಭಾರತ ಬ್ರಿಜ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆಯ ಸಹಯೋಗದಲ್ಲಿ ಕರಾವಳಿ ಬ್ರಿಜ್ ಸಂಸ್ಥೆ, ನಗರದ ಮೋತಿ ಮಹಲ್ ಹೋಟೆಲ್‌ನಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಗೌರಿ ರಾವ್ ಸ್ಮಾರಕ ಟ್ರೋಫಿಗಾಗಿ ಗುರುವಾರ ನಡೆಯಲಿರುವ ಸ್ಪರ್ಧೆಯಲ್ಲಿ ವಸಂತಿ ಶಾ ಮತ್ತು ನಿಕಿತಾ ಕಮಲ್ ಕೂಡ ಹೋರಾಡಲಿದ್ದಾರೆ.

10 ದಿನಗಳ ಚಾಂಪಿಯನ್‌ಷಿಪ್‌ನ ಮೊದಲೆರಡು ದಿನಗಳು ಮಹಿಳೆಯರ ಸ್ಪರ್ಧೆಗೆ ಮೀಸಲು. 23 ಪೇರ್‌ಗಳ ಮೊದಲ ದಿನದ ಹಣಾಹಣಿಯ ಕೊನೆಯಲ್ಲಿ ನವದೆಹಲಿಯ ವಸಂತಿ ಶಾ ಮತ್ತು ನಿಕಿತಾ ಕಮಲ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಅವರು 135.91 ಸ್ಕೋರು ಕಲೆ ಹಾಕಿದರು. 79.45 ಸ್ಕೋರು ಗಳಿಸಿದ ವಿದ್ಯಾ ಮತ್ತು ಕಲ್ಪನಾ ಎರಡನೇ ಸ್ಥಾನ ಗಳಿಸಿದರು. 2022ರ ಯೂತ್ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ ಪೇರ್ ವಿಭಾಗದಲ್ಲಿ ಈ ಜೋಡಿ ಬೆಳ್ಳಿ ಪದಕ ಗಳಿಸಿತ್ತು. ಕಲ್ಪನಾ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

22 ಸುತ್ತುಗಳಲ್ಲಿ ಅಗ್ರ ಕ್ರಮಾಂಕದ ಮೊದಲೆರಡು ಜೋಡಿಗೆ ಭಾರಿ ಪೈಪೋಟಿ ನೀಡಿದ ಮುಂಬೈನ ಹಿಮಾನಿ ಖಂಡೆಲ್ವಾಲ್ ಮತ್ತು ವೃಂದಾ ಜುಂಜುನ್‌ವಾಲ 74.23 ಸ್ಕೋರುಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು.

ಫೈನಲ್ ಸುತ್ತು ಪ್ರವೇಶಿಸಿದ ಜೋಡಿಗಳು: ವಸಂತಿ ಶಾ, ನಿಕಿತಾ ಕಮಲ್‌–1 (ಸ್ಕೋರು: 135.91), ಕಲ್ಪನಾ ಗುರ್ಜರ್‌, ವಿದ್ಯಾ ಪಟೇಲ್‌–2 (79.45), ಹಿಮಾನಿ ಖಂಡೆಲ್ವಾಲ, ವೃಂದಾ ಜುಂಜುನ್‌ವಾಲ–3 (74.23), ಪ್ರಿಯಾ ಬಾಲಸುಬ್ರಹ್ಮಣ್ಯನ್‌, ಬಿಂದಿಯಾ ಕೊಹ್ಲಿ–4 (65.86), ಆಶಾ ಶರ್ಮಾ, ಸವ್ಲೀನ್ ತಡಾನಿ–5 (47.05), ಸಾರಿಕಾ ಮಿತ್ತಲ್‌, ಶೀತಲ್‌ ಬನ್ಸಾಲ್‌–6 (41.82), ದೇವಿ ಮುತ್ತು ಭಟ್ನಾಗರ್‌, ಅಲಕಾ ಜೈನ್‌–7 (28.23), ಮೋನಿಕಾ ಜಾಜು, ಜೇಸಲ್ ದಾಬ್ರಿವಾಲ–8 (28.23), ಗೋಪಿಕಾ ತಂಡನ್‌, ಬಿಂದಿಯಾ ನಾಯ್ಡು–9 (23), ಸ್ಮಿತಾ ಗೋವಿಲ್ಕರ್‌, ಸುರಭಿ ಪ್ರವೀಣ್ ಲೆಲೆ–10 (8.36), ರಿಚಾ ಶ್ರೀರಾಮ್‌, ಕಾಮನಾ ಶರ್ಮಾ–11 (7.32), ಉಷಾ ಕಾಬ್ರ, ಮರಿಯಾನ್ ಕರ್ಮಾರ್ಕರ್‌–12 (1.05).

ರಾಷ್ಟ್ರೀಯ ಬ್ರಿಜ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಫೈನಲ್ ಮೇಲೆ ಕಣ್ಣಿಟ್ಟು ಸ್ಪರ್ಧಿಸಿದ ಜೋಡಿಗಳು –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಬ್ರಿಜ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಫೈನಲ್ ಮೇಲೆ ಕಣ್ಣಿಟ್ಟು ಸ್ಪರ್ಧಿಸಿದ ಜೋಡಿಗಳು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT