ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

Published 5 ಸೆಪ್ಟೆಂಬರ್ 2024, 15:33 IST
Last Updated 5 ಸೆಪ್ಟೆಂಬರ್ 2024, 15:33 IST
ಅಕ್ಷರ ಗಾತ್ರ

ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್, ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ 60 ಕೆ.ಜಿ. ಜೆ1 ಜುಡೊ ಸ್ಪರ್ಧೆಯಲ್ಲಿ ಕಪಿಲ್, ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದರು.

ಪ್ಯಾರಾಲಿಂಪಿಕ್ಸ್ ಜುಡೊ ಕ್ರೀಡೆಯ ಇತಿಹಾಸದಲ್ಲೇ ಭಾರತ ಗೆದ್ದ ಮೊದಲ ಪದಕ ಇದಾಗಿದೆ.

ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಪಿಲ್, 10-0 ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡರು.

2022ರ ಏಷ್ಯನ್ ಗೇಮ್ಸ್‌ನಲ್ಲೂ ಇದೇ ವಿಭಾಗದಲ್ಲಿ ಕಪಿಲ್ ಬೆಳ್ಳಿ ಪದಕ ಗೆದ್ದಿದ್ದರು.

25ನೇ ಪದಕ ಗೆದ್ದ ಭಾರತ...

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 25 ಪದಕಗಳನ್ನು ಗೆದ್ದಿದೆ. ಇದು ಕೂಟವೊಂದರಲ್ಲಿ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿದೆ.

ಹಾಗೆಯೇ ಒಟ್ಟಾರೆಯಾಗಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಟ್ಟು 19 ಪದಕಗಳನ್ನು ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT