ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಸಿಮ್ರಾನ್ ಶರ್ಮಾ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಮಹಿಳೆಯರ 100 ಮೀ. (ಟಿ12) ವಿಭಾಗದ ಎರಡನೇ ಸೆಮಿಫೈನಲ್‌ನಲ್ಲಿ12.33 ಸೆಕೆಂಡುಗಳಲ್ಲಿ ಗುರಿ ತಲುಪಿರುವ ಭಾರತೀಯ ಓಟಗಾರ್ತಿ ಸಿಮ್ರಾನ್, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಈ ರೇಸ್‌ನಲ್ಲಿ ಜರ್ಮನಿಯ ಕ್ಯಾತ್ರಿನ್ ಮುಲ್ಲರ್ ರೊಟ್‌ಗಾರ್ಡ್ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇಂದು ರಾತ್ರಿ ಫೈನಲ್ ನಡೆಯಲಿದ್ದು, ಸಿಮ್ರಾನ್ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
24 ವರ್ಷದ ಸಿಮ್ರಾನ್, ಟಿ200 ಮೀ. ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.