ಬೆಂಗಳೂರು: ಕರ್ನಾಟಕ ತಂಡ, ಕೊಯಮತ್ತೂರಿನಲ್ಲಿ ಶುಕ್ರವಾರ ಮುಕ್ತಾಯಗೊಂಡ 20ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಕರ್ನಾಟಕ 3–0 ಸೆಟ್‌ಗಳಿಂದ ಆತಿಥೇಯ ತಮಿಳುನಾಡು ತಂಡವನ್ನು ಸೋಕಿಸಿತು.
ವಿಒಸಿ ಪಾರ್ಕ್ ಮೈದಾನದಲ್ಲಿ ನಡೆದ ಮೂರು ದಿನಗಳ ಟೂರ್ನಿಯ ಅಂತಿಮ ಪಂದ್ಯದಲ್ಲಿ 25–17, 25–21, 25–17 ರಿಂದ ಜಯಶಾಲಿಯಾದ ಕರ್ನಾಟಕ ಸತತ 16ನೇ ಬಾರಿ ಚಾಂಪಿಯನ್ ಪಟ್ಟ ಪಡೆಯಿತು.