ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಈಜು: ನೀನಾ, ಸುವನಾಗೆ ಪದಕ

Last Updated 11 ಜನವರಿ 2019, 20:10 IST
ಅಕ್ಷರ ಗಾತ್ರ

ಪುಣೆ: ಕರ್ನಾಟಕದ ನೀನಾ ವೆಂಕಟೇಶ್‌ ಹಾಗೂ ಸುವನಾ ಸಿ. ಭಾಸ್ಕರ್‌ ಅವರು ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ 17 ವರ್ಷದೊಳಗಿನವರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಪದಕ ಜಯಿಸಿದರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿನೀನಾ ವೆಂಕಟೇಶ್‌, 1 ನಿಮಿಷ 7.87 ಸೆಕೆಂಡು ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. 1 ನಿಮಿಷ, 7.92 ಸೆಕೆಂಡು ಗಳಲ್ಲಿ ಗುರಿ ತಲುಪಿದ ಸುವನಾ ಬೆಳ್ಳಿಯ ಪದಕ ಪಡೆದರು.

ಫಲಿತಾಂಶಗಳು: ಬಾಲಕರು:17 ವರ್ಷದೊಳಗಿನವರು:100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ವೇದಾಂತ್‌ ಬಾಫಣಾ (ಮಹಾರಾಷ್ಟ್ರ; ಕಾಲ:1 ನಿಮಿಷ)–1, ತನ್ಮಯ್‌ ದಾಸ್‌ (ದೆಹಲಿ)–2, ನಾನಕ್‌ ಮೂಲ್ಚಾಂದನಿ (ದೆಹಲಿ)–3; 400 ಮೀಟರ್ಸ್‌ ಮೆಡ್ಲೆ: ಸ್ವದೇಶ್‌ ಮಂಡಲ್‌ (ದೆಹಲಿ; ಕಾಲ: 4 ನಿಮಿಷ, 47.13 ಸೆಕೆಂಡು)–1, ಶಾನ್‌ ಗಂಗೂಲಿ (ಗೋವಾ)–2, ಸಾಹಿಲ್‌ ಗಂಗೋಟೆ (ಮಹಾರಾಷ್ಟ್ರ)–3;

21 ವರ್ಷದೊಳಗಿನವರು: 100 ಮೀ. ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್‌ (ಕರ್ನಾಟಕ; ಕಾಲ: 57.07 ಸೆಕೆಂಡು)–1, ಜೇವಿಯರ್‌ ಡಿಸೋಜಾ (ಗೋವಾ)–2, ಶಿವ ಶ್ರೀಧರ್‌ (ಕರ್ನಾಟಕ)–3; 400 ಮೀಟರ್ಸ್‌ ಮೆಡ್ಲೆ: ಶಿವ ಶ್ರೀಧರ್‌ (ಕರ್ನಾಟಕ; ಕಾಲ: 4 ನಿಮಿಷ, 41.75 ಸೆಕೆಂಡು)–1, ವಿಶಾಲ್‌ ಗ್ರೆವಾಲ್‌ (ದೆಹಲಿ)–2, ಯಶ್‌ ವರ್ಮಾ (ತೆಲಂಗಾಣ)–3.

ಬಾಲಕಿಯರು:17 ವರ್ಷದೊಳಗಿನವರು: 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ನೀನಾ ವೆಂಕಟೇಶ್‌ (ಕರ್ನಾಟಕ; ಕಾಲ: 1 ನಿಮಿಷ, 7.87 ಸೆಕೆಂಡು)–1, ಸುವನಾ ಭಾಸ್ಕರ್‌ (ಕರ್ನಾಟಕ)–2, ಪ್ರತ್ಯಾಸ ರಾಯ್‌ (ಒಡಿಶಾ)–3. 400 ಮೀಟರ್ಸ್‌ ಫ್ರೀಸ್ಟೈಲ್‌:ಪ್ರಾಚಿ ಟೋಕಸ್‌ (ದೆಹಲಿ; ಕಾಲ: 4 ನಿಮಿಷ, 37.99 ಸೆಕೆಂಡು)–1, ಖುಷಿ ದಿನೇಶ್‌ (ಕರ್ನಾಟಕ)–2, ಆನ್ಯಾ ವಾಲಾ (ಮಹಾರಾಷ್ಟ್ರ)–3;4X100 ಮೀಟರ್ಸ್‌ ಫ್ರೀಸ್ಟೈಲ್‌: ದೆಹಲಿ (ಕಾಲ: 4 ನಿಮಿಷ, 9.36 ಸೆಕೆಂಡು)–1, ಮಹಾರಾಷ್ಟ್ರ–2, ಕರ್ನಾಟಕ–3.

21 ವರ್ಷದೊಳಗಿನವರು: 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಯುಗ ಬೃನಾಲೆ (ಮಹಾರಾಷ್ಟ್ರ; ಕಾಲ: 1 ನಿಮಿಷ, 8.46 ಸೆಕೆಂಡು)–1, ಸೌಬ್ರಿತ್ಯ ಮಂಡಲ್‌ (ಪಶ್ಚಿಮ ಬಂಗಾಳ)–2, ನೈರಿತಿ ಎಸ್‌. ವ್ಯಾಸ್‌ (ರಾಜಸ್ಥಾನ)–3; 400 ಮೀಟರ್ಸ್‌ ಫ್ರೀಸ್ಟೈಲ್‌: ಭವಿಕಾ ದುಗರ್‌ (ತಮಿಳುನಾಡು; ಕಾಲ: 4 ನಿಮಿಷ, 41.43 ಸೆಕೆಂಡು)–1, ಜಾಸ್ಮಿನ್‌ ಗುರುಂಗ್‌ (ಹರಿಯಾಣ)–2, ರುತುಜಾ ತೆಲಂಗಾವ್ಕರ್‌ (ಮಹಾರಾಷ್ಟ್ರ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT