ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಈಜು ಸ್ಪರ್ಧೆ: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಈಜುಪಟುಗಳು ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದಲ್ಲಿ ಶುಕ್ರವಾರ ಪಾರಮ್ಯ ಮೆರೆದಿದ್ದಾರೆ.

ಈಜು ಸ್ಪರ್ಧೆಯ ಮೊದಲ ದಿನ ಕರ್ನಾಟಕ ತಂಡ ಐದು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಜಯಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

17 ವರ್ಷದೊಳಗಿನವರ ಬಾಲಕರ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ರಾಜ್ಯದ ವಿ.ಆರ್‌.ಶಾಂಭವ್‌ 1 ನಿಮಿಷ 56.66 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಚಿನ್ನದ ಸಂಭ್ರಮ ಆಚರಿಸಿದರು. ಎಸ್‌.ಅನೀಶ್‌ ಗೌಡ (1:57.46ಸೆ.) ಈ ವಿಭಾಗದ ಬೆಳ್ಳಿಯ ಪದಕ ಪಡೆದರು.

ಬಾಲಕಿಯರ 200 ಮೀಟರ್ಸ್‌ ಫ್ರೀಸ್ಟೈಲ್‌ ಚಿನ್ನವು ಕರ್ನಾಟಕದ ಖುಷಿ ದಿನೇಶ್‌ ಪಾಲಾಯಿತು. ಖುಷಿ ಅವರು ಗುರಿ ತಲುಪಲು 2 ನಿಮಿಷ 10.29 ಸೆಕೆಂಡು ತೆಗೆದುಕೊಂಡರು.

50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ನೀನಾ ವೆಂಕಟೇಶ್‌ (28.58ಸೆ.) ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

800 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಖುಷಿ ದಿನೇಶ್‌, ಕರ್ನಾಟಕ ಖಾತೆಗೆ ಚಿನ್ನದ ಪದಕ ಸೇರ್ಪಡೆ ಮಾಡಿದರು. ಅವರು 9 ನಿಮಿಷ 26.19 ಸೆಕೆಂಡುಗಳಲ್ಲಿ ಗುರಿ ಸೇರಿದರು.

21 ವರ್ಷದೊಳಗಿನ ಪುರುಷರ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಸಿ.ಜೆ.ಸಂಜಯ್‌ (1:56.95ಸೆ.) ಬೆಳ್ಳಿಯ ಪದಕ ಜಯಿಸಿದರು.

ಮಹಿಳೆಯರ 50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸುನೈನಾ ಮಂಜುನಾಥ್‌ ಚಿನ್ನದ ಸಾಧನೆ ಮಾಡಿದರು. ಅವರು 30.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT