ಅಮ್ಮಾನ್: ಭಾರತದ ಖುಷಿ ಚಾಂದ್ ಮತ್ತು ಟೀಕಮ್ ಸಿಂಗ್ ಅವರು ಏಷ್ಯನ್ 17 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಸೆಮಿಫೈನಲ್ ತಲುಪಿದರು.

ಕಳೆದ ವರ್ಷ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಖುಷಿ ಚಾಂದ್ ಬಾಲಕಿಯರ 46 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ಫೈನಲ್ನಲ್ಲಿ ವಿಯೆಟ್ನಾಮಿನ ನೂಯೆನ್ ಥಿ ಹಾಂಗ್ ಯೆನ್ ಅವರನ್ನು ಸೋಲಿಸಿದರು.

ಬಾಲಕರ 52 ಕೆ.ಜಿ. ವಿಭಾಗದಲ್ಲಿ ಟೀಕಮ್, ಪ್ಯಾಲೆಸ್ತೀನ್ನ ಓಥ್ಮನ್ ದಿಯಾನ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು.

ಅಂಬೇಡ್ಕರ್ ಮೀಥಿ (48 ಕೆ.ಜಿ), ಉಧಾಮ್ ಸಿಂಗ್ (54 ಕೆ.ಜಿ) ಮತ್ತು ರಾಹುಲ್ ಗರಿಯಾ (57 ಕೆ.ಜಿ) ಅವರು 5–0 ಸರ್ವಾನುಮತದ ತೀರ್ಪಿನಲ್ಲಿ ಎದುರಾಳಿಗಳ ಜಯಗಳಿಸಿದರು. ಅಮನ್ ದೇವ್ (50 ಕೆ.ಜಿ) ಅವರು ಜೋರ್ಡಾನ್ನ ಒಸಾಮಾ ಅಲ್–ಖಾಲ್ದಿ ವಿರುದ್ಧ 3–2ರಲ್ಲಿ ಜಯ ಪಡೆದರು.

44 ರಿಂದ 46 ಕೆ.ಜಿ. ವಿಭಾಗದಲ್ಲಿ ಭಾರತದ ಧ್ರುವ್ ಖಾರ್ಬ್ 0–5 ರಿಂದ ಉಕ್ರೇನಿನ ಮಿಖೈಲೊ ಸಿಡೊರೆಂಕೊ ಎದುರು ಸೋಲನುಭವಿಸಿದರು.

ಬಾಲಕಿಯರ 52 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸಮೀಕ್ಷಾ ಪ್ರದೀಪ್ ಸಿಂಗ್, ಜಪಾನ್ನ ರುನಾ ಇಟೊ ಎದುರು ಸೋಲನುಭವಿಸಿದರು. ಭಾರತದ ರಾಧಾಮಣಿ ಲೊಂಗ್ಜಾಮ್ ಅವರು ಕಜಕಸ್ತಾನದ ಇಂದಿರಾ ಕಿದಿರಮೊಲ್ಡೆಯೇವಾ ಅವರಿಗೆ 1–4ರಲ್ಲಿ ಮಣಿದರು. 54 ಕೆ.ಜಿ. ವಿಭಾಗದಲ್ಲಿ ಭಾರತದ ಜನ್ನತ್ 1–4 ರಲ್ಲಿ ಉಕ್ರೇನಿನ ಅನ್ಹೇಲಿನಾ ರುಮಿಯಂಟ್ಸೇವಾ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.