ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ: ಕಂಗಂಡ, ಪೊಂಜಂಡಕ್ಕೆ ಜಯ

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಕಂಗಂಡ, ಪೊಂಜಂಡ, ಮೂಕಳೇರ, ಕೊಟ್ಟಂಗಡ, ತೀತಿಮಾಡ ತಂಡಗಳು ಕುಂಡ್ಯೋಳಂಡ ಕಪ್‌ಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಗುರುವಾರ ಜಯ ದಾಖಲಿಸಿದವು.

ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಎದುರಾಳಿ ತಂಡಗಳ ವಿರುದ್ಧ ಪ್ರಾಬಲ್ಯ ಮೆರೆದವು.

ನಾಪಂಡ ತಂಡದವರು ಐದಂಡ ವಿರುದ್ಧ 5-1ರಿಂದ, ಮಾತ್ರಂಡ ತಂಡದವರು ಅಜ್ಜಟ್ಟಿರ ವಿರುದ್ಧ 4-0 ಗೋಲುಗಳಿಂದ ಜಯಗಳಿಸಿದರೆ, ಚೆಂದಂಡ ತಂಡವು ಮಂಡೆಯಂಡ ವಿರುದ್ಧ, ಚಟ್ಟಂಗಡ ತಂಡವು ಕಾರೇರ ವಿರುದ್ಧ, ಕೊಂಗೆಟಿರ ತಂಡವು ಮಲ್ಲಂಡ ವಿರುದ್ಧ 4-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದವು.

ಇನ್ನುಳಿದ ಪಂದ್ಯಗಳಲ್ಲಿ ಅಪ್ಪಚೆಟ್ಟೋಳಂಡ ಶಿವಚಾಳಿಯಂಡ ವಿರುದ್ದ 2-0ರಲ್ಲಿ, ಸೋಮಯಂಡ ನಿಡುಮಂಡ ವಿರುದ್ದ 3-0 ರಲ್ಲಿ, ಮಚ್ಚಾರಂಡ ಶಾಂತೆಯಂಡ ವಿರುದ್ಧ 2-1ರಲ್ಲಿ ಜಯಗಳಿಸಿದವು.

ಪಾಂಡಂಡ ತಂಡದವರು ಕಲ್ಲಂಗಡ ವಿರುದ್ಧ 2-1 ಗೋಲಿನಿಂದ, ಬಟ್ಟಿರ ವಿರುದ್ಧ ಮಲ್ಲಜಿರ 3-0 ರಲ್ಲಿ, ಅಲ್ಲಪಂಡ ತಂಡವು ಚಂಗುಲಂಡ ವಿರುದ್ಧ 3-1ರಲ್ಲಿ, ಅಲ್ಲಾರಂಡ ಪಟ್ಟ ತಂಡದವರು ಚರುವಂಡ ವಿರುದ್ಧ 2-1ರಲ್ಲಿ, ಪೆಮ್ಮಂಡ ತಂಡವು ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 3- 0 ಗೋಲುಗಳಿಂದ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT