ಶೆನ್ಝೆನ್ (ಚೀನಾ): ಭಾರತದ ಲಕ್ಷ್ಯ ಸೇನ್ ಅವರು ಪ್ರಥಮ ಕಿಂಗ್ ಕಪ್ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಮೂರನೇ ಸ್ಥಾನ ಪಡೆದರು.

23 ವರ್ಷ ವಯಸ್ಸಿನ ಸೇನ್ ಅವರು ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಸ್ಪರ್ಧೆಯಲ್ಲಿ 21-17 21-11ರಿಂದ ಫ್ರಾನ್ಸ್ನ ಉದಯೋನ್ಮುಖ ಆಟಗಾರ ಅಲೆಕ್ಸ್ ಲೇನಿಯರ್ ಅವರನ್ನು ಸೋಲಿಸಿ, ಸುಮಾರು ₹36 ಲಕ್ಷ ನಗದು ಬಹುಮಾನ ಜೇಬಿಗಿಳಿಸಿಕೊಂಡರು.

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಸೇನ್, ಸೆಮಿಫೈನಲ್ನಲ್ಲಿ 19-21 19-21ರಿಂದ ಹಾಲಿ ವಿಶ್ವ ಜೂನಿಯರ್ ಚಾಂಪಿಯನ್ ಹು ಝಿಯಾನ್ ಎದುರು ಪರಾಭವಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.