ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕ್ಸಿಂಗ್: ಲವ್ಲಿನಾ ಬೋರ್ಗೊಹೈನ್‌ಗೆ ಬೆಳ್ಳಿ

Published 16 ಜೂನ್ 2024, 13:03 IST
Last Updated 16 ಜೂನ್ 2024, 13:03 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲವ್ಲೀನಾ ಬೋರ್ಗೊಹೈನ್ ಜೆಕ್ ಗಣರಾಜ್ಯದ ಲ್ಯಾಬೆಮ್‌ ನಲ್ಲಿ ನಡೆದ ಗ್ರ್ಯಾನ್‌ ಪ್ರಿ ಉಸ್ತಿನಾದ್ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗಳಿಸಿದರು.

ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲಿರುವ ಲವ್ಲೀನಾ ಶನಿವಾರ ತಡರಾತ್ರಿ ನಡೆದ 75 ಕೆ.ಜಿ ವಿಭಾಗದ ಫೈನಲ್ ಬೌಟ್‌ನಲ್ಲಿ 2–3ರ ಸ್ಪ್ಲಿಟ್ ತೀರ್ಮಾನದಲ್ಲಿ ಚೀನಾದ ಲೀ ಕಿಯಾನ್ ವಿರುದ್ಧ ಸೋತರು. 

ಲಿ ಕಿಯಾನ್ ಅವರು ಎರಡು ಬಾರಿ ಒಲಿಂಪಿಕ್ ಪದಕವಿಜೇತೆಯಾಗಿದ್ದಾರೆ. ಅಲ್ಲದೇ ಮೂರು ಬಾರಿ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತರೂ ಹೌದು. ಹೋದ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿಯೂ ಲವ್ಲೀನಾ ಅವರು ಕಿಯಾನ್ ವಿರುದ್ಧ ಸೋತರು. 

‘ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿರುವುದು ಒಳ್ಳೆಯ ಅನುಭವವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಲು ಉತ್ತಮ ಪೂರ್ವಾಭ್ಯಾಸ ದೊರೆಯಿತು’ ಎಂದು ಲವ್ಲೀನಾ ಅವರು ಹೇಳಿರುವು ವಿಡಿಯೊ ತುಣುಕನ್ನು ಕೇಂದ್ರ ಕ್ರೀಡಾ ಸಚಿವ ಮನ್ಸೂಕ್ ಮಾಂಡವಿಯಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಮಾಂಡವಿಯಾ ಅವರೂ ಲವ್ಲೀನಾ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ. 

ಈ ಟೂರ್ನಿಯನ್ನು ವಿಶ್ವ ಬಾಕ್ಸಿಂಗ್ (ಡಬ್ಲ್ಯುಬಿ) ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಲವ್ಲೀನಾ, ಲಿ ಕಿಯಾನ್, ರೆಫ್ಯುಜಿ ಬಾಕ್ಸಿಂಗ್ ತಂಡದ ಸಿಂಡಿ ಎನ್‌ಗ್ಯಾಂಬಾ ಹಾಗೂ ಇಂಗ್ಲೆಂಡ್‌ನ ಚಂತಲಾ ರೀಡ್ ಸ್ಪರ್ಧಿಸಿದ್ದರು. 

ಲವ್ಲೀನಾ ತಾವು ಆಡಿದ ಮೂರು ಬೌಟ್‌ಗಳಲ್ಲಿ ಒಂದರಲ್ಲಿ ಮಾತ್ರ ಜಯಿಸಿದರು. ಎರಡರಲ್ಲಿ ಸೋತರು. 

ಅಸ್ಸಾಂ ರಾಜ್ಯದ  ಲವ್ಲೀನಾ ಅವರು ಈ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ಲವ್ಲೀನಾ ಸೇರಿದಂತೆ ಭಾರತದ ಆರು ಮಂದಿ ಬಾಕ್ಸರ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT