ಬೆಂಗಳೂರು: ಭರ್ಜರಿ ಆಟವಾಡಿದ ಮಲ್ನಾಡ್ ಫಾಲ್ಕನ್ಸ್ ತಂಡವು ಗ್ರ್ಯಾನ್ಪ್ರಿ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಖಚಿತಪಡಿಸಿತು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಅಂಗಣದಲ್ಲಿ ಬುಧವಾರ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ ಮಲ್ನಾಡ್ 6–1ರಿಂದ ಮೈಸೂರು ಪ್ಯಾಂಥರ್ಸ್ ಎದುರು ಗೆದ್ದಿತು. ಇದರೊಂದಿಗೆ 15 ಪಾಯಿಂಟ್ಸ್ ಗಳಿಸಿತು.

ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ ಮಲ್ನಾಡ್ ತಂಡದ ದೃತಿ ಯತೀಶ್8-15, 15-11, 5-15ರಿಂದ ತಾನ್ಯಾ ಹೇಮಂತ್ ಎದುರು ಎಡವಿದರು. ಇದರೊಂದಿಗೆ ಮೈಸೂರು ಆರಂಭದಲ್ಲೇ ಮುನ್ನಡೆ ಗಳಿಸಿತು.

ಆದರೆ ಮಿಥುನ್ ಮಂಜುನಾಥ್– ಪೃಥ್ವಿ ಕೆ. ರಾಯ್ ಪುರುಷರ ಡಬಲ್ಸ್ ‘ಟ್ರಂಪ್‘ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಮಲ್ನಾಡ್ಗೆ 2–1ರ ಮುನ್ನಡೆ ತಂದುಕೊಟ್ಟರು. ಈ ಜೋಡಿಯು15-12, 15-12ರಿಂದ ಬಿ.ಎಂ.ರಾಹುಲ್– ಚಿರಂಜೀವಿ ರೆಡ್ಡಿ ಅವರನ್ನು ಮಣಿಸಿತು. ಸಿಂಗಲ್ಸ್ನಲ್ಲಿ ಶಮಂತ್ ರಾವ್ ಕಿದಿಯೂರ್15-11, 15-14ರಿಂದ ರೋಹಿತ್ ಮರಿಸ್ವಾಮಿ ಅವರಿಗೆ ಆಘಾತ ನೀಡಿದಾಗ ಮಲ್ನಾಡ್ ತಂಡದ ಮುನ್ನಡೆ 3–1ಕ್ಕೆ ತಲುಪಿತು.

ಮಿಶ್ರ ಡಬಲ್ಸ್ನಲ್ಲಿ ಮಲ್ನಾಡ್ ತಂಡದ ಅರವಿಂದ್ ಕೊಂಗಾರ–ದೃತಿ ವೆಂಕಟೇಶ್2-15, 8-15ರಿಂದ ತಾನ್ಯಾ– ಕಿರಣ್ ಕುಮಾರ್ ಜೋಡಿಗೆ ಸೋತರು. ಆದರೆ ‘ಟ್ರಂಪ್‘ ಪಂದ್ಯವಾಗಿ ಘೋಷಿಸಲ್ಪಟ್ಟ ‘ಸೂಪರ್‘ ಪಂದ್ಯದಲ್ಲಿ ಮಿಥುನ್ ಮಂಜುನಾಥ್, ಪೃಥ್ವಿ ಮತ್ತು ಶಮಂತ್21-15ರಿಂದ ರಾಹುಲ್, ಚಿರಂಜೀವಿ ಮತ್ತು ರೋಹಿತ್ ಅವರನ್ನು ಮಣಿಸಿ ತಿರುಗೇಟು ನೀಡಿದರು. ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.