ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರ‍್ಯಾಂಕಿಂಗ್ ಆಟಗಾರರು ಕ್ವಾರ್ಟರ್ ಫೈನಲ್‌ಗೆ

ಮಂಗಳಾ ಕಪ್‌ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್‌ ಟೂರ್ನಿ; ರುದ್ರ ಸಾಹಿ, ಆದಿತ್ಯ, ಸ್ನೇಹಾಗೆ ಗೆಲುವು
Published 11 ಮೇ 2024, 15:29 IST
Last Updated 11 ಮೇ 2024, 15:29 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ರ‍್ಯಾಂಕಿಂಗ್‌ ಆಟಗಾರರ ಪಟ್ಟಿಯಲ್ಲಿರುವ ರುದ್ರ ಶಾಹಿ, ಆದಿತ್ಯ ದಿವಾಕರ್‌ ಮತ್ತು ಹೇಮಂತ್ ಗೌಡ ಅವರು ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಮಂಗಳಾ ಕಪ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲೂ ರ‍್ಯಾಂಕಿಂಗ್ ಆಟಗಾರ್ತಿಯರಾದ ಸ್ನೇಹಾ ಎಸ್ ಮತ್ತು ಪ್ರಾಚಿತಾ ಪಿ ಎಂಟರ ಘಟ್ಟ ತಲುಪಿದರು. ರಾಜ್ಯದ ಅಗ್ರ ರ‍್ಯಾಂಕಿಂಗ್ ಆಟಗಾರ್ತಿ ಗ್ಲೋರಿಯಾ ಆಠವಳೆ ಗೈರಾದ ಕಾರಣ ಬಿಂದುಶ್ರೀ ವಾಕ್ ಓವರ್ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. 

ರಾಜ್ಯ ರ‍್ಯಾಂಕಿಂಗ್ ಪಟ್ಟಿಯ ಐದನೇ ಸ್ಥಾನದಲ್ಲಿರುವ ಮೈಸೂರು ಆರ್‌ಬಿಎಯ ರುದ್ರಸಾಹಿ, ಎಡಬ್ಲ್ಯುಎಸ್‌ಬಿಯ ಗುರುಗುಹನ್ ವಿರುದ್ಧ 21–13, 12–21, 21–17ರಲ್ಲಿ ಜಯ ಸಾಧಿಸಿದರು. 10ನೇ ಕ್ರಮಾಂಕದ ಆಟಗಾರ ಎಎಸ್‌ಡಬ್ಲ್ಯುಬಿಯ ಆದಿತ್ಯ ದಿವಾಕರ್ ಬೆಂಗಳೂರಿನ ವಿಶಾಲ್ ಮಹರ್ ಅವರನ್ನು 14–21, 21–11, 21–17ರಲ್ಲಿ ಮಣಿಸಿದರು. ಬೆಂಗಳೂರಿನ ಅರೈಸ್ ಅಕಾಡೆಮಿಯ ಹೇಮಂತ್ ಗೌಡ, ವೆಂಕೀಸ್ ಟ್ರೇನಿಂಗ್ ಸೆಂಟರ್‌ನ ಶ್ರೇಯಶ್ವಂತ್ ವಿರುದ್ಧ 22–10, 20–22, 21–19ರಲ್ಲಿ ಜಯ ಸಾಧಿಸಿದರು.

ಮಹಿಳೆಯರ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಆಕಾಡೆಮಿಯ ಸ್ನೇಹಾ ಎಸ್‌ 21–10, 8–21, 21–14ರಲ್ಲಿ ಗ್ಲೋಬಲ್ ಬ್ಯಾಡ್ಮಿಂಟನ್‌ನ ಟ್ರಿವಿಯಾ ವೇಗಸ್‌ ವಿರುದ್ಧ ಗೆದ್ದು ಎಂಟರ ಘಟ್ಟ ಪ್ರವೇಶಿಸಿದರು. ಬೆಂಗಳೂರಿನ ವೈಪಿಬಿಎಯ ಪ್ರಾಚಿತಾ ಪಿ 21–6, 21–16ರಲ್ಲಿ ಬೆಂಗಳೂರಿನ ಸಾನಿಯಾ ಬಾಬು ಅವರನ್ನು ಮಣಿಸಿದರು. 

16ರ ಘಟ್ಟದ ಇತರ ಫಲಿತಾಂಶಗಳು: ಪುರುಷರ ಸಿಂಗಲ್ಸ್‌: ಅರೈಸ್‌ನ ನಿಖಿಲ್ ಶ್ಯಾಮ್‌ಗೆ ವೆಂಕೀಸ್‌ ಅಕಾಡೆಮಿಯ ಗಿರೀಶ್ ವೆಂಕಟ್ ವಿರುದ್ಧ 21–17, 21–11ರಲ್ಲಿ ಜಯ. ಮಂಗಳೂರಿನ ಸಹರ್ಷ್‌ ಪ್ರಭುಗೆ ಶಿವಮೊಗ್ಗದ ಅಭಿಷೇಕ್ ವಿರುದ್ಧ 25–27, 21–3, 21–19ರಲ್ಲಿ, ವೈಪಿಬಿಎಯ ರೋಹಿತ್‌ಗೆ ಅರೈಸ್‌ನ ಋಷಿಕೇಶ್ ವಿರುದ್ಧ 24–22, 21–11ರಲ್ಲಿ, ಎಡಬ್ಲ್ಯುಎಸ್‌ಬಿಯ ಆದಿತ್ಯನ್‌ಗೆ ಆರ್‌ಬಿಎಯ ನಿಶಾಂತ್‌ ವಿರುದ್ಧ 19–21, 21–8, 21–13ರಲ್ಲಿ, ಎಲ್‌ಎನ್‌ಬಿಎಯ ಶ್ರೀವರ್ಷ್‌ನ್‌ಗೆ ಎಡಬ್ಲ್ಯುಎಸ್‌ಬಿಯ ಹಿಮಾಂಶು ದೇಸಾಯಿ ವಿರುದ್ಧ 21–13, 21–16ರಲ್ಲಿ ಗೆಲುವು. 

ಮಹಿಳೆಯರ ಸಿಂಗಲ್ಸ್‌: ಸೆಲೆನೈಟ್‌ನ ಅನ್ವಿತಾ ವಿಜಯ್‌ಗೆ ಬೆಂಗಳೂರು ನಿಸರ್ಗದ ತನ್ಮಯ ಶಂಕರ್ ವಿರುದ್ಧ 21–13, 21–15ರಲ್ಲಿ, ಅರೈಸ್‌ನ ಪ್ರೇರಣಾ ನೀಲೂರಿಗೆ ಉಡುಪಿಯ ರಕ್ಷಿತಾ ಶೇಟ್‌ ವಿರುದ್ಧ 21–14, 21–17ರಲ್ಲಿ, ಆರ್‌ಆರ್‌ಬಿಎಯ ಕನಕ ಕಲಾಕೋಟಿಗೆ ಬೆಂಗಳೂರು ಷಟ್ಲರ್ಸ್‌ ಅಲೈಯ ಸಹನಾ ವಿರುದ್ಧ 19–21, 23–21, 21–15ರಲ್ಲಿ, ಸಮರ್ಥ್‌ ಸ್ಕೂಲ್‌ನ ಕೀರ್ತಿ ಲಕ್ಷ್ಮಿಗೆ ರಾಣೆಬೆನ್ನೂರಿನ ಐಶ್ವರ್ಯಾ ಅಗಡಿ ವಿರುದ್ಧ 21–12, 21–13ರಲ್ಲಿ, ಅರೈಸ್‌ನ ಅಖಿಲಾ ಆನಂದ್‌ಗೆ ಎಲ್‌ಎಬ್‌ಬಿಯ ನೀತಿ ಸಾಯಿ ವಿರುದ್ಧ 22–20, 21–13ರಲ್ಲಿ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT