ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳದ ಪ್ರತಿಭೆಗಳಿಗೆ ಉಚಿತ ಬಾಕ್ಸಿಂಗ್ ತರಬೇತಿ: ಮೇರಿ ಕೋಮ್

Published : 1 ಮೇ 2022, 13:30 IST
ಫಾಲೋ ಮಾಡಿ
Comments

ತಿರುವನಂತಪುರಂ: ಕೇರಳದ ಪ್ರತಿಭಾವಂತ ಯುವ ಬಾಕ್ಸಿಂಗ್‌ ಪಟುಗಳಿಗೆ ತಮ್ಮ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುವುದಾಗಿ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್‌ ಮೇರಿ ಕೋಮ್ ಹೇಳಿದ್ದಾರೆ.

ಮೊದಲ ಬಾರಿಗೆ ನಡೆಯುತ್ತಿರುವ ಕೇರಳ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕಾಗಿ ಇಲ್ಲಿಗೆ ಆಗಮಿಸಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.

‘ದೇಶಕ್ಕೆ ಕೇರಳ ಹಲವು ಬಾಕ್ಸರ್‌ಗಳನ್ನು ನೀಡಿದೆ. ಸದ್ಯ ಇಲ್ಲಿ ಉದಯೋನ್ಮುಖ ಬಾಕ್ಸರ್‌ಗಳ ಕೊರತೆ ಇದೆ. ರಾಜ್ಯದ ಯುವ ಬಾಕ್ಸರ್‌ಗಳು ಮುಂದೆ ಬಂದರೆ ಅವರಿಗೆ ತರಬೇತಿ ನೀಡಲಾಗುವುದು‘ ಎಂದು ಮೇರಿ ನುಡಿದರು.

ಒಲಿಂಪಿಯನ್ ಹಾಕಿ ಆಟಗಾರ ಪಿ.ಆರ್‌. ಶ್ರೀಜೇಶ್‌, ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ರವಿ ದಹಿಯಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT