ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

F1: ಅಭ್ಯಾಸ ಸುತ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಮರ್ಸಿಡಿಸ್‌ನ ರಸೆಲ್‌

Published 25 ನವೆಂಬರ್ 2023, 13:24 IST
Last Updated 25 ನವೆಂಬರ್ 2023, 13:27 IST
ಅಕ್ಷರ ಗಾತ್ರ

ಅಬುಧಾಬಿ: ಅಬುಧಾಬಿ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್‌ನ ಅಭ್ಯಾಸ ಸುತ್ತಿನಲ್ಲಿ ಮರ್ಸಿಡಿಸ್‌ ರೇಸರ್ ಜಾರ್ಜ್‌ ರಸೆಲ್‌ ಅವರು ಮೊದಲಿಗರಾಗುವ ಮೂಲಕ, ಮೂರು ಬಾರಿಯ ಚಾಂಪಿಯನ್ ರೆಡ್‌ಬುಲ್‌ನ ಮ್ಯಾಕ್ಸ್ ವರ್ಸ್ಟ್‌ಪ್ಪನ್‌ ಅವರನ್ನು ಹಿಂದಿಕ್ಕಿದರು.

ಭಾನುವಾರ ಅಂತಿಮ ಹಣಾಹಣಿ ನಡೆಯಲಿದ್ದು, ಇದರಲ್ಲಿ ಪ್ರತಿಷ್ಠೆ ಉಳಿಸಿಕೊಳ್ಳಲು ಗೆಲುವು ದಾಖಲಿಸುವುದು ರೆಡ್‌ಬುಲ್‌ಗೆ ಅನಿವಾರ್ಯವಾಗಿದೆ. 2011ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಒಂದಲ್ಲಾ ಒಂದು ಗ್ರ್ಯಾನ್‌ಪ್ರಿಯನ್ನು ಮರ್ಸಿಡಿಸ್ ಗೆಲ್ಲುತ್ತಾ ಬಂದಿದೆ. ಈ ಬಾರಿ ಫೆರಾರಿ ತೀವ್ರ ಪೈಪೋಟಿ ನೀಡುತ್ತಿದ್ದು ಕೇವಲ ನಾಲ್ಕು ಅಂಕಗಳಷ್ಟೇ ಹಿಂದಿದೆ.

ಶುಕ್ರವಾರ ನಡೆದ ಅಭ್ಯಾಸ ಪಂದ್ಯದಲ್ಲೂ ರಸೆಲ್‌ ಅತ್ಯಂತ ವೇಗದ ಚಾಲಕ ಎಂದೆನಿಸಿಕೊಂಡರು ಕಳೆದ ವರ್ಷ ಬ್ರೆಜಿಲ್‌ನಲ್ಲಿ ನಡೆದ ರೇಸ್‌ನಲ್ಲಿ, ತಮ್ಮ ತಂಡಕ್ಕೆ ಮೊದಲ ಸ್ಥಾನವನ್ನು ಇವರು ತಂದುಕೊಟ್ಟಿದ್ದರು. ಮರಿನಾ ಸರ್ಕ್ಯೂಟ್‌ನಲ್ಲಿ ನಡೆದ ಆ ರೇಸ್‌ನಲ್ಲಿ 24.418 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ಮ್ಯಾಕ್ಲರ್ನ್‌ನ ಲ್ಯಾಂಡೊ ನಾರಸ್‌ ಅವರು 2ನೇ ಸ್ಥಾನದಲ್ಲಿದ್ದರು. ಇವರ ಮತ್ತು ರಸೆಲ್‌ ನಡುವಿನ ಅಂತರ ಕೇವಲ 0.095 ಸೆಕೆಂಡು. ವರ್ಸ್ಟ್‌ಪ್ಪನ್‌ 0.735 ಸೆಕೆಂಡುಗಳ ಕಾಲ ಹಿಂದೆ ಇದ್ದು 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ರೇಸಿನ ಸಂದರ್ಭದಲ್ಲಿ ಕಾರು ಜಿಗಿದ ಅನುಭವವಾಗಿದ್ದನ್ನು ಡಚ್‌ ಚಾಲಕ ರೇಡಿಯೊ ಮೂಲಕ ಹೇಳಿದ್ದು ದಾಖಲಾಗಿದೆ. ‘ಏನಾಗುತ್ತಿದೆಯೋ ತಿಳಿಯುತ್ತಿಲ್ಲ’ ಎಂದಿದ್ದ ಅವರು ಕಾಂಗರೂಗೆ ಹೋಲಿಸಿದ್ದರು. ಅಂತಿಮ ರೇಸ್‌ನಲ್ಲಿ ಇಂಥ ಅನುಭವ ಆಗದಿರಲಿ ಎಂದು ಆಶಿಸಿದ್ದರು.

ರೆಡ್‌ಬುಲ್‌ನ ವರ್ಸ್ಟ್‌ಪ್ಪನ್‌ ಅವರು ಈ ವರ್ಷದಲ್ಲಿ ಈವರೆಗೂ ನಡೆದ 22 ರೇಸ್‌ನಲ್ಲಿ 19ನೇ ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ. ರೆಡ್‌ಬುಲ್ ತಂಡವು ಈವರೆಗೂ ಒಟ್ಟು 21 ರೇಸ್‌ಗಳನ್ನು ಗೆದ್ದಿದೆ. ಫೆರಾರಿಯ ಚಾರ್ಲ್ಸ್‌ ಲ್ಯಾಕ್ರೆಕ್ ಅವರು ಅತ್ಯಂತ ವೇಗವಾಗಿ ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದರು. ಆದರೆ ಶುಕ್ರವಾರದ ರೇಸ್‌ನಲ್ಲಿ ಕಾರು ಅಪಘಾತಕ್ಕೀಡಾದ ಪರಿಣಾಮ ಅವರು ನಂತರದ ಸ್ಥಾನ ಪಡೆದರು.

ಮೊದಲ ಸ್ಥಾನ ಪಡೆದ ರಸೆಲ್ ಅವರು ಈವರೆಗೂ ಏಳು ಬಾರಿ ಗೆದ್ದಿದ್ದಾರೆ. ಇದೇ ತಂಡದ ಲೂಯಿಸ್ ಹ್ಯಾಮಿಲ್ಟನ್‌ 12ನೇ ಬಾರಿ ಗೆಲುವು ದಾಖಲಿಸಿದ್ದಾರೆ. ರೆಡ್‌ಬುಲ್‌ನ ಸರ್ಗಿಯೊ ಪೆರ್ಜ್‌ ಅವರು 11 ಬಾರಿ ಗೆಲುವು ದಾಖಲಿಸಿದ್ದಾರೆ.

ಮ್ಯಾಕ್ಲರ್ನ್‌ ಕೂಡಾ ಆಸ್ಟನ್ ಮಾರ್ಟಿನ್‌ ಜೊತೆ ತೀವ್ರ ಪೈಪೋಟಿ ಹೊಂದಿದೆ. ಭಾರೀ ಮೊತ್ತದ ಬಹುಮಾನ ಇರುವ ಈ ರೇಸ್‌ನಲ್ಲಿ ಕೇವಲ 11 ಪಾಯಿಂಟ್‌ಗಳಷ್ಟೇ ಇವು ಹಿಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT