ನವದೆಹಲಿ: ಭಾರತದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಬ್ಯಾಡ್ಮಿಂಟನ್ ಕೋಚ್‌ಗಳಾಗಿ ಇಂಡೊನೇಷ್ಯಾದ ಮುಲ್ಯೊ ಹಂಡೊಯೊ ಮತ್ತು ಮಲೇಷ್ಯಾದ ತಾನ್ ಕಿಮ್ ಹೆರ್ ಆಯ್ಕೆಯಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಫೆಡರೇಷನ್ ಈ ತಿಂಗಳ ಅಂತ್ಯದಲ್ಲಿಹಂಡೊಯೊಮತ್ತು ತಾನ್ ಕಿಮ್ ಹೆಸರುಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ಅಥೆನ್ಸ್ ಒಲಿಂಪಿಕ್ ಚಿನ್ನದ ಪದಕ ವಿಜೇತ ತೌಫಿಕ್ ಹಿದಾಯತ್ ಅವರಿಗೆ ತರಬೇತಿ ನೀಡಿದ ಮುಲ್ಯೊ ಅವರು ಭಾರತದಲ್ಲಿ ಅಲ್ಪಾವಧಿಗೆ ಕೋಚ್ ಆಗಿದ್ದರು. 2017ರಲ್ಲಿ ಪುರುಷರ ಸಿಂಗಲ್ಸ್ ಆಟಗಾರರಾದ ಕಿದಂಬಿ ಶ್ರೀಕಾಂತ್, ಬಿ ಸಾಯಿ ಪ್ರಣೀತ್ ಮತ್ತು ಎಚ್.ಎಸ್. ಪ್ರಣಯ್ ಅವರ ಯಶಸ್ಸಿನಲ್ಲಿ ಪಾತ್ರ ವಹಿಸಿದ್ದರು.

ಮತ್ತೊಂದೆಡೆ, ತಾನ್ ಕಿಮ್ ಹೆರ್, ಭಾರತದ ಅತ್ಯುತ್ತಮ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ಅವರ ತರಬೇತಿಯಲ್ಲಿ ಈ ಜೋಡಿಯು2018ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮತ್ತು ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತ್ತು.

‘ಕೋಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಕೆಲವೇ ಪ್ರಮುಖ ಹೆಸರುಗಳಲ್ಲಿ ಮುಲ್ಯೊ ಮತ್ತು ತಾನ್ ಕಿಮ್ ಹೆರ್ ಅವರೂ ಸೇರಿದ್ದಾರೆ. ಅವರ ಭಾರತದ ಆಟಗಾರರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವುದರಿಂದ ಅವರ ಸೇವೆಗಳನ್ನು ಪಡೆಯಲು ಸಂಸ್ಥೆ ಬಯಸುತ್ತದೆ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.

ಪುರುಷರ ಸಿಂಗಲ್ಸ್ ಕೋಚ್ ಆಗಿದ್ದ ಆಗಸ್ ದ್ವಿ ಸ್ಯಾಂಟೋಸೊ ಅವರು ತಮ್ಮ ಒಪ್ಪಂದವನ್ನು ಪೂರ್ಣಗೊಳಿಸುವ ಕೆಲವು ವಾರಗಳ ಮೊದಲು, ನವೆಂಬರ್ 18ರಂದು ಬಿಎಐ ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.