ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್‌

Last Updated 1 ಜುಲೈ 2019, 20:00 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಕರ್ನಾಟಕ ತಂಡ ಇಲ್ಲಿ ನಡೆದ 46ನೇ ರಾಷ್ಟ್ರೀಯ ಜೂನಿಯರ್‌ ಹಾಗೂ 36ನೇ ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಜೂನಿಯರ್‌ ವಿಭಾಗದಲ್ಲಿ ಒಟ್ಟು 452 ಪಾಯಿಂಟ್‌ಗಳನ್ನು ಕರ್ನಾಟಕ ಕಲೆ ಹಾಕಿತು. ಸಬ್‌ ಜೂನಿಯರ್‌ ವಿಭಾಗದಲ್ಲಿ 294 ಪಾಯಿಂಟ್‌ಗಳನ್ನು ಸಂಗ್ರಹಿಸಿತು.

ಕೂಟದಲ್ಲಿ ಒಟ್ಟು 17 ನೂತನ ದಾಖಲೆಗಳು ನಿರ್ಮಾಣವಾದವು. ಜೂನಿಯರ್‌ ಬಾಲಕರ ವಿಭಾಗದಲ್ಲಿ ಗುಜರಾತ್‌ನ ಆರ್ಯನ್‌ ನೆಹ್ರಾ ಹಾಗೂ ಗೋವಾದ ಶೋಹಾನ್‌ ಗಂಗೂಲಿ ಅತ್ಯುತ್ತಮ ಈಜುಪಟು ಪ್ರಶಸ್ತಿ ಪಡೆದುಕೊಂಡರು. ಅವರು ತಲಾ ಐದು ಚಿನ್ನದ ಪದಕಗಳನ್ನು ಅವರು ಬಾಚಿಕೊಂಡರು. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಕೇನಿಷಾ ಗುಪ್ತಾ ಹಾಗೂ ಅಪೇಕ್ಷಾ ಫರ್ನಾಂಡಿಸ್‌ ತಲಾ ಐದು ಚಿನ್ನದ ಪದಕಗಳೊಂದಿಗೆ ಅತ್ಯುತ್ತಮ ಈಜುಪಟುಗಳು ಎನಿಸಿದರು.

ವಾಟರ್‌ಪೋಲೊ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಪಶ್ಚಿಮ ಬಂಗಾಳ ಪ್ರಥಮ, ಕೇರಳ ದ್ವಿತೀಯ ಹಾಗೂ ಮಹಾರಾಷ್ಟ್ರ ತೃತೀಯ ಸ್ಥಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಕೇರಳ ಪ್ರಥಮ, ಪಶ್ಚಿಮ ಬಂಗಾಳ ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಸಬ್‌ ಜೂನಿಯರ್‌ ಸ್ಪರ್ಧೆಯಲ್ಲಿ ಕರ್ನಾಟಕದ ಪಾರಮ್ಯ: ಬಾಲಕರ ಹಾಗೂ ಬಾಲಕಿಯರ ಸಬ್‌ ಜೂನಿಯರ್‌ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಚಾಂಪಿಯನ್ ಪಟ್ಟ ಧರಿಸಿತು. ಅಸ್ಸಾಂನ ಸಂಸ್ಕಾರ್‌ ಭುಯನ್‌ ನಾಲ್ಕು ಚಿನ್ನ ಹಾಗೂ ಮಾನಷ್‌ ಪ್ರತಿಮ್‌ ಬೈಷ್ಯಾ ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡು ಬಾಲಕರಲ್ಲಿ ಅತ್ಯುತ್ತಮ ಈಜುಪಟುಗಳು ಎನಿಸಿದರು. ಬಾಲಕಿಯರ ವಿಭಾಗದಲ್ಲಿ ಅಸ್ಸಾಂನ ಶುಭ್ರಾಂಶಿ ಪ್ರಿಯದರ್ಶಿನಿ ಹಾಗೂ ನೈಷಿ ರಾಹುಲ್‌ ಶ್ರೇಷ್ಠ ಈಜುಪಟು ಗೌರವ ಸಂಪಾದಿಸಿದರು.

ಡೈವಿಂಗ್‌ನಲ್ಲಿ ಎಸ್‌ಎಸ್‌ಸಿಬಿ ತಂಡ ಸಮಗ್ರ ಪ್ರಶಸ್ತಿ ಬಾಚಿಕೊಂಡಿತು.

ಐದನೇ ದಿನದ ಫಲಿತಾಂಶ: ಚಾಂಪಿಯನ್‌ಷಿಪ್‌ನ ಐದನೇ ದಿನವಾದಭಾನುವಾರ ಕರ್ನಾಟಕ ಪಾರಮ್ಯ ಮೆರೆಯಿತು. ಬಾಲಕರ ಜೂನಿಯರ್‌ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಅನೀಶ್‌ ಗೌಡ ದ್ವಿತೀಯ, ಜೂನಿಯರ್‌ ಬಾಲಕಿಯರ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಿಧಿಮಾ ವೀರೇಂದ್ರಕುಮಾರ್‌ ಪ್ರಥಮ ಹಾಗೂ ನೀನಾ ವೆಂಕಟೇಶ್‌ ದ್ವಿತೀಯ ಸ್ಥಾನ ಪಡೆದರು. ಬಾಲಕರಸಬ್‌ ಜೂನಿಯರ್‌ 200 ಮೀ. ಮೆಡ್ಲೆಯಲ್ಲಿ ಯಶ್‌ ಕಾರ್ತಿಕ್‌ ದ್ವಿತೀಯ ಹಾಗೂ ರೇಣುಕಾಚಾರ್ಯ ಎಚ್‌. ತೃತೀಯ ಸ್ಥಾನ ಪಡೆದರು.

ಬಾಲಕಿಯರ ಸಬ್‌ ಜೂನಿಯರ್‌ 200 ಮೀ. ಮೆಡ್ಲೆಯಲ್ಲಿ ವಿಹಿತಾ ನಯನಾ ಪ್ರಥಮ ಸ್ಥಾನ, ಬಾಲಕರ ಸಬ್‌ ಜೂನಿಯರ್‌ 100 ಮೀ. ಫ್ರೀಸ್ಟೈಲ್‌ನಲ್ಲಿ ಮೋನಿಶ್‌ ಪಿ.ವಿ. ಪ್ರಥಮ, ಬಾಲಕಿಯರ ಜೂನಿಯರ್‌ 50 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್‌ ಪ್ರಥಮ, ಬಾಲಕರ ಜೂನಿಯರ್‌ 100 ಮೀ. ಫ್ರೀಸ್ಟೈಲ್‌ನಲ್ಲಿ ತನೀಶ್‌ ಮ್ಯಾಥ್ಯು ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT