ನವದೆಹಲಿ: ಭಾರತ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ತಂಡದ ಆಟಗಾರ್ತಿಯ ಜತೆ ‘ಅನುಚಿತ ವರ್ತನೆ’ ತೋರಿದ್ದಕ್ಕೆ, ಸಹಾಯಕ ಕೋಚ್ ಅಲೆಕ್ಸ್ ಅಂಬ್ರೋಸ್ ಅವರನ್ನು ವಜಾ ಮಾಡಲಾಗಿದೆ.

‘ಆಟಗಾರ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಬ್ರೋಸ್ ಅವರನ್ನು ವಜಾ ಮಾಡಲಾಗಿದೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಐಎಫ್‌ಎಫ್ ಆಡಳಿತ ನೋಡಿಕೊಳ್ಳಲು ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಸಮಿತಿ (ಸಿಒಎ) ಸದಸ್ಯ ಎಸ್.ವೈ.ಖುರೇಷಿ ಹೇಳಿದ್ದಾರೆ.

17 ವರ್ಷದೊಳಗಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುವ ಅಂಗವಾಗಿ ಭಾರತ ತಂಡ ನಾರ್ವೆ ಪ್ರವಾಸದಲ್ಲಿದ್ದು, ಅಲ್ಲಿ ಈ ಘಟನೆ ನಡೆದಿತ್ತು. ತಂಡದ ಮುಖ್ಯ ಕೋಚ್ ಥಾಮಸ್ ಡೆನೆರ್ಬಿ ಅವರು ಈ ಬಗ್ಗೆ ಎಐಎಫ್‌ಎಫ್‌ಗೆ ದೂರು ನೀಡಿದ್ದರು. ತಂಡವನ್ನು ತೊರೆದು ತಕ್ಷಣವೇ ಭಾರತಕ್ಕೆ ವಾಪಸಾಗುವಂತೆ ಅಂಬ್ರೋಸ್ ಅವರಿಗೆ ಸೂಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.