ನವದೆಹಲಿ: ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ಗೆ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಇದೇ ಶುಕ್ರವಾರ ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ನ ಅಂತಿಮ ಲೆಗ್ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

ಒಟ್ಟು 14 ಡೈಮಂಡ್ ಲೀಗ್ ಕೂಟಗಳಲ್ಲಿ ನಾಲ್ಕರಲ್ಲಷ್ಟೇ ಪುರುಷರ ಜಾವೆಲಿನ್ ಥ್ರೊ ಸ್ಪರ್ಧೆಗಳು ನಡೆಯುತ್ತವೆ. ಚೋಪ್ರಾ ಎರಡರಲ್ಲಿ ಮಾತ್ರ ಭಾಗವಹಿಸಿದ್ದರೂ, ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಜ್ಯೂರಿಚ್ನಲ್ಲಿ ಇದೇ 27 ಮತ್ತು 28ರಂದು ಡೈಮಂಡ್ ಲೀಗ್ ಫೈನಲ್ ನಿಗದಿಯಾಗಿದೆ. ಜಾವೆಲಿನ್ ಫೈನಲ್ 28ರಂದು ನಡೆಯಲಿದೆ.

ಈ ಮೊದಲು ಚೋಪ್ರಾ ಅವರು ಆಗಸ್ಟ್ 16ರಂದು ನಡೆದಿದ್ದ ಸಿಲೇಸಿಯಾ ಲೆಗ್ನಲ್ಲೂ ಭಾಗವಹಿಸಿರಲಿಲ್ಲ.

ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಲೆಗ್ನಲ್ಲಿ ಚೋಪ್ರಾ 90.23 ಮೀ. ದೂರ ಎಸೆದಿದ್ದರು. ಅಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಮೊದಲ ಸ್ಥಾನ ಮತ್ತು ಚೋಪ್ರಾ ಎರಡನೇ ಸ್ಥಾನ ಗಳಿಸಿದ್ದರು. ಜೂನ್ನಲ್ಲಿ ಪ್ಯಾರಿಸ್ನಲ್ಲಿ ನಡೆದ ಲೀಗ್ನಲ್ಲಿ 27 ವರ್ಷ ವಯಸ್ಸಿನ ಭಾರತದ ತಾರೆ 88.16 ಮೀ. ಎಸೆತ ದಾಖಲಿಸಿ ಚಿನ್ನ ಗೆದ್ದಿದ್ದರು.

ಪಾಯಿಂಟ್ಗಳ ಆಧಾರದಲ್ಲಿ ಒಟ್ಟು ಆರು ಮಂದಿ ಮಾತ್ರ ಫೈನಲ್ಗೆ ಅರ್ಹತೆ ಪಡೆಯುತ್ತಾರೆ.

ಚೋಪ್ರಾ ಅವರು ಟೋಕಿಯೊದಲ್ಲಿ ಸೆಪ್ಟೆಂಬರ್ 13 ರಿಂದ 21ರವರೆಗೆ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ನಲ್ಲೂ ಕಣಕ್ಕೆ ಇಳಿಯಲಿದ್ದಾರೆ.

ಏನಿಂದು ಡೈಮಂಡ್ ಲೀಗ್:

ಡೈಮಂಡ್ ಲೀಗ್ ಜಾಗತಿಕ ಮಟ್ಟದಲ್ಲಿ ನಡೆಯುವ ಒಂದು ದಿನದ ಸರಣಿ ಅಥ್ಲೆಟಿಕ್ ಕೂಟವಾಗಿದೆ. ಒಟ್ಟು 14 ಡೈಮಂಡ್ ಲೀಗ್ ಕೂಟಗಳು ನಡೆಯುತ್ತವೆ. ಈ ಕೂಟಗಳಲ್ಲಿ ನೀಡಲಾಗುವ ಪಾಯಿಂಟ್ಸ್ ಆಧಾರದ ಮೇಲೆ ಅಥ್ಲೀಟುಗಳು ಫೈನಲ್ಗೆ ಅರ್ಹತೆ ಪಡೆಯುತ್ತಾರೆ.

ಒಟ್ಟು 32 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ.

ಫೈನಲ್ನಲ್ಲಿ ವಿಜೇತರಾಗುವ ಅಥ್ಲೀಟುಗಳು ಡೈಮಂಡ್ ಲೀಗ್ ಚಾಂಪಿಯನ್ ಎನಿಸಿಕೊಳ್ಳುತ್ತಾರೆ. ಪ್ರತಿ ವಿಜೇತ ಕ್ರೀಡಾಪಟು ಡೈಮಂಡ್ ಟ್ರೋಫಿಯೊಂದಿಗೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಸ್ಗೆ ವೈಲ್ಡ್ ಕಾರ್ಡ್ ಪಡೆಯುತ್ತಾರೆ. ಚಾಂಪಿಯನ್ ಅಥ್ಲೀಟ್ ಟ್ರೋಫಿಯ ಜೊತೆಗೆ ₹26.11 ಲಕ್ಷ ಸಂಪಾದಿಸಲಿದ್ದಾರೆ. ರನ್ನರ್ ಅಪ್ ಆಗುವ ಅಥ್ಲೀಟ್ ₹10.44 ಲಕ್ಷ ಮತ್ತು ಮೂರನೇ ಸ್ಥಾನ ಪಡೆಯುವವರು ₹6 ಲಕ್ಷ ಬಹುಮಾನ ಜೇಬಿಗಿಳಿಸುವರು.

ಈ ಬಾರಿ 32 ಸ್ಪರ್ಧೆಗಳ ಪೈಕಿ ಎಂಟು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮೊತ್ತ ಹೆಚ್ಚಿಸಲಾಗಿದೆ. ಈ ಎಂಟು ಸ್ಪರ್ಧೆಗಳು– ಪುರುಷರ ವಿಭಾಗದ 100 ಮೀ ಮತ್ತು 1,500 ಮೀ., ಓಟ, ಪುರುಷರ 400 ಮೀ. ಹರ್ಡಲ್ಸ್ ಓಟ, ಪುರುಷರ ಪೋಲ್ವಾಲ್ಟ್, ಮಹಿಳೆಯರ ವಿಭಾಗದ 100 ಮೀ. ಓಟ, 100 ಮೀ ಹರ್ಡಲ್ಸ್, 3000 ಮೀ. ಓಟ ಮತ್ತು ಲಾಂಗ್ಜಂಪ್.

ಈ ಎಂಟು ಸ್ಪರ್ಧೆಗಳ ವಿಜೇತರು ತಲಾ ₹43.50 ಲಕ್ಷ, ಎರಡು ಮತ್ತು ಮೂರನೇ ಸ್ಥಾನ ಪಡೆಯುವವರು ₹17.41 ಲಕ್ಷ ಮತ್ತು ₹8.70 ಲಕ್ಷ ಬಹುಮಾನ ಹಣ ಗಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.