ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವೊ ನುರ್ಮಿ ಕೂಟ: ನೀರಜ್ ಅಲಭ್ಯ

Published 10 ಜೂನ್ 2023, 14:53 IST
Last Updated 10 ಜೂನ್ 2023, 14:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಪಾವೊ ನುರ್ಮಿ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಸ್ನಾಯುಸೆಳೆತದ ಗಾಯದಿಂದ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯ ಉಲ್ಬಣಿಸದಿರಲು ಈ ನಿರ್ಧಾರ ಕೈಗೊಂಡಿದ್ದಾರೆ.

’ನೀರಜ್ ಅವರಿಗೆ ಆರೋಗ್ಯ ತೊಂದರೆ ಇದೆ. ಆದ್ದರಿಂದ ಸ್ಪರ್ಧೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆಂದು ನೀರಜ್ ಮ್ಯಾನೇಜರ್ ಪಾವೊ ನುರ್ಮಿ ಕೂಟದ ಸಂಘಟಕರಿಗೆ ಸಂದೇಶ ಕಳಿಸಿದ್ದಾರೆ‘ ಎಂದು ಫಿನ್ನಿಷ್ ಅಥ್ಲೆಟಿಕ್ಸ್ ಫೆಡರೇಷನ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ನಾಯು ಸೆಳೆತದ ತೊಂದರೆಯಿಂದಾಗಿ ನೆದರ್ಲೆಂಡ್ಸ್‌ನಲ್ಲಿ ನಡೆದಿದ್ದ ಎಫ್‌ಬಿಕೆ ಗೇಮ್ಸ್‌ (ಜೂನ್‌ 4ರಂದು)ನಿಂದಲೂ ನೀರಜ್ ಹಿಂದೆ ಸರಿದಿದ್ದರು. ಮೇ 29ರಂದು ಅವರು ಈ ಬಗ್ಗೆ ಪ್ರಕಟಣೆ ನೀಡಿದ್ದರು.

ಪ್ರಸಕ್ತ ಋತುವಿನಲ್ಲಿ ನೀರಜ್ ಉತ್ತಮ  ಆರಂಭ ಮಾಡಿದ್ದರು. ಹೋದ ತಿಂಗಳು ನಡೆದಿದ್ದ ದೋಹಾ ಡೈಮಂಡ್ ಲೀಗ್‌ ಕೂಟದಲ್ಲಿ 88.67 ಮೀಟರ್ಸ್ ದೂರ ಜಾವೆಲಿನ್ ಥ್ರೋ ಸಾಧನೆ ಮಾಡಿದ್ದರು. 25 ವರ್ಷದ ಚೋಪ್ರಾ ಅವರು ಕಣಕ್ಕೆ ಮರಳುವ ಖಚಿತವಾಗಿ ತಿಳಿದುಬಂದಿಲ್ಲ.

ಆಗಸ್ಟ್‌ನಲ್ಲಿ ಹಂಗರಿಯ ಬುಡಾಪೆಸ್ಟ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಏಷ್ಯನ್ ಗೇಮ್ಸ್‌ ಇದೆ.  ಡೈಮಂಡ್ ಲೀಗ್ ಫೈನಲ್ಸ್‌ ಕೂಡ ಇದೇ ವರ್ಷ ಇದೆ. ವಿಶ್ವದ ಅಗ್ರಶ್ರೇಯಾಂಕದ ಅಥ್ಲೀಟ್ ನೀರಜ್ ಈ ಕೂಟಗಳಲ್ಲಿ ಸಮಯಕ್ಕೆ ಸಂಪೂರ್ಣ ಫಿಟ್  ಆಗುವ ಭರವಸೆ ಇದೆ.

ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲು ಚೋಪ್ರಾ  ಅವರು ಸಲ್ಲಿಸಿದ್ದ ಪ್ರಸ್ತಾವವನ್ನು ಹೋದ ತಿಂಗಳು ಅನುಮೋದಿಸಿದ್ದ ಕೇಂದ್ರ ಕ್ರೀಡಾ ಇಲಾಖೆಯು ಜೂನ್‌ನಲ್ಲಿ ನಡೆಯುವ ವಿಶ್ವಮಟ್ಟದ ಗೋಲ್ಡ್‌ ಲೆವಲ್ ಕೂಟಗಳಲ್ಲಿ ಭಾಗವಹಿಸುವರು ಎಂದು ಹೇಳಿತ್ತು.

2020ರ ಟೋಕಿಯೊ ಒಲಿಂಪಿಕ್‌ ಕೂಟದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದು ದಾಖಲೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT