ಪ್ಯಾರಿಸ್: ಭಾರತದ ಕೆಲವೇ ಕೆಲವು ವಿಶ್ವದರ್ಜೆಯ ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಅವರೂ ಒಬ್ಬರು. ಇದೀಗ ಅವರು ತಮ್ಮ ಫಾರ್ಮ್ ಮತ್ತು ಫಿಟ್‌ನೆಸ್ ಸತ್ವಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಂಗಳವಾರ ಇಲ್ಲಿ ನಡೆಯಲಿರುವ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಯಿಸಿದ್ದ ಚಿನ್ನದ ಪದಕವನ್ನು ಇಲ್ಲಿಯೂ ಉಳಿಸಿಕೊಳ್ಳುವ ಛಲದಲ್ಲಿ ಅವರಿದ್ದಾರೆ.

ಭಾರತವು ಸ್ವಾತಂತ್ರ್ಯ ಪಡೆದ ನಂತರದ ಒಲಿಂಪಿಕ್ಸ್ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಎರಡನೇ ಅಥ್ಲೀಟ್ ನೀರಜ್. ಒಲಿಂಪಿಕ್ಸ್ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ಚಿನ್ನ ಜಯಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ತಮ್ಮ ಸೂಪರ್‌ಸ್ಟಾರ್ ಪಟ್ಟವನ್ನು ಉಳಿಸಿಕೊಂಡು ಬಂದಿದ್ದಾರೆ.

ಹೋದ ವರ್ಷ ಬುಡಾಪೆಸ್ಟ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗಳಿಸಿದ್ದರು. ತಮ್ಮ ಸರಳ ನಡೆನುಡಿಯಿಂದ ದೇಶದ ಕ್ರೀಡಾಪ್ರೇಮಿಗಳ ಮನ ಗೆದ್ದಿದ್ದಾರೆ. 26 ವರ್ಷದ ನೀರಜ್ ಅವರು ಅಪಾರ ಒತ್ತಡದ ಸನ್ನಿವೇಶದಲ್ಲಿಯೂ ಸಮಚಿತ್ತದಿಂದ ಇರುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಇದು ಅವರ ದೊಡ್ಡ ಸಾಮರ್ಥ್ಯವಾಗಿದೆ.

ಆದರೆ ಅವರು ದೊಡ್ಡ ಚಾಂಪಿಯನ್‌ಷಿಪ್‌ಗಳ ಸಂದರ್ಭದಲ್ಲಿ ಕೆಲಕಾಲ ಗೌಪ್ಯವಾಗಿ ಉಳಿದುಬಿಡುವ ಬಗ್ಗೆ ತಿಳಿದುಕೊಳ್ಳುವ ವಿದೇಶಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ಯಾರಿಸ್‌ನಲ್ಲಿಯೂ ಉತ್ತರ ಸಿಗಲಿಲ್ಲ. ಆದರೆ ನೀರಜ್ ಅವರ ಫಿಟ್‌ನೆಸ್ ಕುರಿತು ಚರ್ಚೆ ನಡೆದಿದೆ.

ಈಚೆಗೆ ಅವರು ತೊಡೆ ಸಂಧುವಿನ ಸಣ್ಣ ಪ್ರಮಾಣದ ನೋವಿನಿಂದ ಬಳಲಿದ್ದರು. ಅದರಿಂದಾಗಿ ಅವರು ಕೆಲವು ಪ್ರಮುಖ ಸ್ಪರ್ಧೆಗಳಿಂದ ಹಿಂದೆ ಸರಿದಿದ್ದರು. ಕೇವಲ ಮೂರು ಸ್ಪರ್ಧೆಗಳಲ್ಲಿ (ದೋಹಾ ಡೈಮಂಡ್ ಲೀಗ್, ರಾಷ್ಟ್ರೀಯ ಫೆಡರೇಷನ್ ಕಪ್ ಮತ್ತು ಪಾವೊ ನುರ್ಮಿ ಗೇಮ್ಸ್) ಮಾತ್ರ ಭಾಗವಹಿಸಿದ್ದರು. ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದಿದ್ ಕೂಟದಲ್ಲಿ ಅವರು 88.36 ಮೀಟರ್ಸ್ ದೂರ ಜಾವೆಲಿನ್ ಎಸೆದಿದ್ದರು.

ಅವರ ಕೋಚ್ ಕ್ಲಾಸ್ ಬಾರ್ಟೊನೀಜ್ ಅವರು ನೀಡಿರುವ ಮಾಹಿತಿಯ ಪ್ರಕಾರ ನೀರಜ್ ಸಂಪೂರ್ಣ ಫಿಟ್ ಇದ್ದಾರೆ.

ನೀರಜ್ ಅವರು ಈಚೆಗೆ ಇಲ್ಲಿಯ ಕ್ರೀಡಾಗ್ರಾಮ ಪ್ರವೇಶಿಸಿದ ನಂತರ ಸಾಮಾಜಿಕ ಜಾಲತಾಣಕ್ಕೆ ಚಿತ್ರ ಹಾಕಿದ್ದರು. ಅದರಲ್ಲಿ ಅವರು ಉಲ್ಲಸಿತರಾಗಿ ಕಂಡಿದ್ದರು.

ಚೋಪ್ರಾ ಅವರಿಗೆ ಪ್ರಮುಖವಾಗಿ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೇಚಾ, ಮಾಜಿ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ಪಾಕಿಸ್ತಾನದ ಅರ್ಷದ್ ನದೀಂ, ಜರ್ಮನಿಯ ಜೋಡಿ ಜೂಲಿಯನ್ ವೆಬರ್ ಮತ್ತು ಮ್ಯಾಕ್ಸ್ ದೆಹನಿಂಗ್ ನಿಕಟ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಭಾರತದವರೇ ಆದ ಕಿಶೋರ್ ಜೇನಾ ಕೂಡ ಕಣದಲ್ಲಿದ್ದಾರೆ. ಅವರು ಕೂಡ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅವರು 87.40 ಮೀ ಥ್ರೋ ಮಾಡಬಲ್ಲ ಸಮರ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.