ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್: ಮನಸೆಳೆದ ಶ್ರೀಹರಿ, ಸಜನ್ ಪೈಪೋಟಿ

ಸ್ಕಿನ್ಸ್‌ ವಿಭಾಗದಲ್ಲಿ ರೋಚಕತೆಯ ಅಲೆ
Published 26 ನವೆಂಬರ್ 2023, 0:30 IST
Last Updated 26 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಒಲಿಂಪಿಯನ್ ಶ್ರೀಹರಿ ನಟರಾಜ್ ಹಾಗೂ ಸಜನ್ ಪ್ರಕಾಶ್ ಶನಿವಾರ ಆರಂಭವಾದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರದ (ಎನ್‌ಎಸಿ) ಈಜುಕೊಳದಲ್ಲಿ ಬಿಎಸಿಯ ಸಜನ್ ಮತ್ತು ಡಾಲ್ಫಿನ್‌ ಅಕ್ವಾಟಿಕ್ಸ್‌ನ  ಶ್ರೀಹರಿಯ ಈಜು ನೋಡಿದ ಉಳಿದ ಸ್ಪರ್ಧಿಗಳು ಮತ್ತು ಪ್ರೇಕ್ಷಕರು ರೋಮಾಂಚನಗೊಂಡರು.  ಮೂರು ಸುತ್ತುಗಳ ಫೈನಲ್‌ನಲ್ಲಿ ಪದಕ ವಿಜೇತರನ್ನು ನಿರ್ಣಯಿಸುವ ಸ್ಕಿನ್ಸ್‌ ವಿಭಾಗ 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ನಲ್ಲಿ  ಇಬ್ಬರೂ ಈಜುಪಟುಗಳು ತುರುಸಿನ ಪೈಪೋಟಿ ನಡೆಸಿದರು. ಅದರಲ್ಲಿ ಶ್ರೀಹರಿ (25.89ಸೆ) ಚಿನ್ನ ಗೆದ್ದರೆ, ಸಜನ್ (26.59ಸೆ) ಅಲ್ಪ ಅಂತರದಲ್ಲಿ ಬೆಳ್ಳಿ ಗೆದ್ದರು.

50 ಮೀ ಬಟರ್‌ಫ್ಲೈ ಸ್ಕಿನ್ಸ್ ವಿಭಾಗದಲ್ಲಿ ಸಜನ್ ಪ್ರಕಾಶ್ (ಬಿಎಸಿ; 24.89ಸೆ) ಅವರು ಶ್ರೀಹರಿ ನಟರಾಜ್ ಅವರನ್ನು ಹಿಂದಿಕ್ಕಿ ಚಿನ್ನ ಜಯಿಸಿದರು. ಬೆಳಿಗ್ಗೆ ನಡೆದ 200 ಮೀ ವೈಯಕ್ತಿಕ ಮೆಡ್ಲೆಯಲ್ಲಿ ಶ್ರೀಹರಿ ಚಿನ್ನ ಜಯಿಸಿದರು. 

ಮಹಿಳೆಯರ ವಿಭಾಗದಲ್ಲಿ; ರಿಧಿಮಾ ವೀರೇಂದ್ರಕುಮಾರ್ ಮತ್ತು ಅನುಮತಿ ಚೌಗುಲೆ ಅವರು ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದರು.

ಫಲಿತಾಂಶಗಳು

ಪುರುಷರು

200 ಮೀ ವೈಯಕ್ತಿಕ ಮೆಡ್ಲೆ: ಶ್ರೀಹರಿ ನಟರಾಜ್ (ಡಾಲ್ಫಿನ್ ಅಕ್ವಾಟಿಕ್ಸ್; 2ನಿ,14.05ಸೆ) –1, ಶಿವಾಂಕ್ ವಿಶ್ವನಾಥ್ (ಬಸವನಗುಡಿ ಅಕ್ವಾಟಿಕ್ಸ್ ಸೆಂಟರ್; 2ನಿ, 14.48ಸೆ)–2, ಉತ್ಸವ ದತ್ತಾ (ರೇ ಸೆಂಟರ್; 2ನಿ,18.30ಸೆ)–3

100 ಮೀ ಬ್ಯಾಕ್‌ಸ್ಟ್ರೋಕ್: ಧ್ಯಾನ್ (ಗ್ಲೋಬಲ್ ಸ್ವಿಮ್ ಸೆಂಟರ್; 1ನಿ,00.42ಸೆ)–1, ಝೇವಿಯರ್ ಡಿಸೋಜಾ (ಜೈನ್ ವಿವಿ; 1ನಿ, 01.44ಸೆ)–2, ಬಿ ಜತಿನ್ (ಗ್ಲೋಬಲ್ ಸ್ವಿಮ್ ಸೆಂಟರ್; 1ನಿ,00.42ಸೆ)–3 

50 ಮೀ ಬ್ಯಾಕ್‌ಸ್ಟ್ರೋಕ್‌, ಸ್ಕಿನ್ಸ್: ಶ್ರೀಹರಿ ನಟರಾಜ್ (ಡಾಲ್ಫಿನ್ ಕ್ವಾಟಿಕ್ಸ್; 25.89ಸೆ)–1, ಸಜನ್ ಪ್ರಕಾಶ್ (ಬಿಎಸಿ; 26.59ಸೆ)–2, ಆಕಾಶ್ ಮಣಿ (ಬಿಎಸಿ; 26.82ಸೆ)–3.

100 ಮೀ ಬಟರ್‌ಫ್ಲೈ: ಶುಭ್ರಾಂತ್ ಪಾತ್ರ (ರೇ ಸೆಂಟರ್; 57.52ಸೆ)–1, ಪ್ರಥಮ್ ಶರ್ಮಾ (ಡಾಲ್ಫಿನ್ ಅಕ್ವಾಟಿಕ್ಸ್; 57.94ಸೆ)–2, ಎಸ್. ಉನ್ನಿಕೃಷ್ಣನ್ (ಗ್ಲೋಬಲ್ ಸ್ವಿಮ್ ಸೆಂಟರ್; 58.75ಸೆ)–3

50 ಮೀ ಫ್ಲೈ ಸ್ಕಿನ್ಸ್: ಸಜನ್ ಪ್ರಕಾಶ್ (ಬಿಎಸಿ; 24.89ಸೆ)–1, ಶ್ರೀಹರಿ ನಟರಾಜ್ (ಡಾಲ್ಫಿನ್; 25.32ಸೆ)–2, ಶಿವ ಶ್ರೀಧರ್ (ಬಿಎಸಿ; 25.42ಸೆ)–3 

ಗುಂಪು ಟ: 100 ಮೀ ಬ್ಯಾಕ್‌ಸ್ಟ್ರೋಕ್: ಆಕಾಶಮಣಿ (ಬಿಎಸಿ; 59.12ಸೆ)–1, ಅಶ್ವಿನ್ ಜೈಸ್ವಾರ್ (ಎಂಜಿಎಂಒ ಸ್ವಿಮಿಂಗ್ ಪೂಲ್; 1ನಿ,04.32ಸೆ)–2, ಸ್ವರೂಪ್ ಧನುಚೆ (ಬಿಎಸಿ; 1ನಿ,05.17ಸೆ)–3

400 ಮೀ ಫ್ರೀಸ್ಟೈಲ್: ಎಸ್. ದರ್ಶನ್ (ಬಿಎಸಿ; 4ನಿ,17.70ಸೆ)–1, ಎಸ್. ಧನುಷ್ (ಬಿಎಸಿ; 4ನಿ,18.82ಸೆ)–2, ದಕ್ಷಣ್ (ಬಿಎಸಿ; 4ನಿ,19.40ಸೆ)–3

200 ಮೀ ವೈಯಕ್ತಿಕ ಮೆಡ್ಲೆ: ಆಕಾಶಮಣಿ (ಬಿಎಸಿ; 2ನಿ,19.42ಸೆ)–1, ಅಶ್ವಿನ್ ಜೈಸ್ವಾರ್ (ಎಂಜಿಎಂಒ; 2ನಿ,20.69ಸೆ)–2, ವಿದಿತ್ ಎಸ್ ಶಂಕರ್ (ಡಾಲ್ಫಿನ್; 2ನಿ.20.73ಸೆ)–3. 

100 ಮೀ ಫ್ಲೈ: ಕಾರ್ತಿಕೇಯನ್ ನಾಯರ್ (ಡಾಲ್ಫಿನ್; 58.70ಸೆ)–1, ರಿಷಭ್ ಸಿಂಗ್ ಧಡವಾಲ್ (ಡಾಲ್ಫಿನ್; 59.06ಸೆ)–2, ಎಸ್. ಧನುಷ್ (ಬಿಎಸಿ; 59.20ಸೆ)–3

ಗುಂಪು 2: 100 ಮೀ ಬ್ಯಾಕ್‌ಸ್ಟ್ರೋಕ್: ವೇದಾಂತ್ ವೆಂಕಟ ಮಧಿರಾ (ಬಿಎಸಿ; 1ನಿ.02.39ಸೆ)–1, ಇದಾಂತ್ ಚತುರ್ವೇದಿ (ಪಿಎಂ. ಈಜುಕೊಳ; 1ನಿ, 03.97ಸೆ)–2, ಪೃಥ್ವಿರಾಜ್ ಮೆನನ್ (ಬಿಎಸಿ); 1ನಿ. 06.11ಸೆ)–3

100 ಮೀ ಫ್ಲೈ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್ ಅಕ್ವಾಟಿಕ್ಸ್; 1ನಿ,00.88ಸೆ)–1, ಅನೀಶ್ ಅನಿರುದ್ಧ ಕೋರೆ (ಎನ್‌ಎಸಿ; 1ನಿ.01.27ಸೆ)–2, ದಕ್ಷ್ ಮಟ್ಟಾ (ಬಿಎಸಿ; 1ನಿ.03.02ಸೆ)–3

ಮಹಿಳೆಯರು: 200 ಮೀ ವೈಯಕ್ತಿಕ ಮೆಡ್ಲೆ: ಅನುಮತಿ ಚೌಗುಲೆ (ಬಿಎಸಿ; 2ನಿ,40.45ಸೆ)–1, ಝಾರಾ ವಿಲಿಯಮ್ಸ್ (ಡಾಲ್ಫಿನ್ ಅಕ್ವಾಟಿಕ್ಸ್; 2ನಿ,43.86ಸೆ)–2, ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ವಿವಿ; 2ನಿ, 48.85ಸೆ)–3.

100 ಮೀ ಬ್ಯಾಕ್‌ಸ್ಟ್ರೋಕ್: ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ವಿವಿ; 1ನಿ,18.21ಸೆ)–1, ಮೃದುಲಾ ಜೈಗಣೇಶ್ (ಎಸೆಸ್; 1ನಿ,20.80ಸೆ)–2.

50 ಮೀ ಬ್ಯಾಕ್‌ಸ್ಟ್ರೋಕ್ ಸ್ಕಿನ್ಸ್: ರಿಧಿಮಾ ವೀರೇಂದ್ರಕುಮಾರ್ (ಬಿಎಸಿ; 29.35ಸೆ)–1, ಶಾಲಿನ್ ಆರ್ ದಿಕ್ಷಿತ್ (ಡಾಲ್ಫಿನ್ ಅಕ್ವಾಟಿಕ್ಸ್; 30.83ಸೆ)–2, ತನ್ಮಯಿ ಧರ್ಮೇಶ್ (ಗ್ಲೋಬಲ್ ಸ್ವಿಮ್ ಸೆಂಟರ್; 34.28ಸೆ)–3

100 ಮೀ ಫ್ಲೈ: ಅನುಮತಿ ಚೌಗುಲೆ (ಬಿಎಸಿ; 1ನಿ, 09.65ಸೆ)–1, ತಿತೀಕ್ಷಾ ಹನುಮಂತರಾಜು (ಗ್ಲೋಬಲ್ ಸ್ವಿಮ್ ಸೆಂಟರ್; 1ನಿ,10.42ಸೆ)–2,  ಆನಾ ಸ್ಫೂರ್ತಿ ತೆರೆಸಾ (ಬಿಎಸಿ; 1ನಿ, 14.57ಸೆ)–3

50 ಮೀ ಫ್ಲೈ ಸ್ಕಿನ್ಸ್: ನೀನಾ ವೆಂಕಟೇಶ್ (ಡಾಲ್ಫಿನ್; 29.62ಸೆ)–1, ರಿಧಿಮಾ ವೀರೇಂದ್ರ ಕುಮಾರ್ (ಬಿಎಸಿ; 30.24ಸೆ)–2, ನೈಶಾ ಶೆಟ್ಟಿ (ಡಾಲ್ಫಿನ್; 30.42ಸೆ)–3

ಗುಂಪು 1: 100 ಮೀ ಬ್ಯಾಕ್‌ಸ್ಟೋಕ್ಸ್: ರಿಧಿಮಾ ವೀರೇಂದ್ರ ಕುಮಾರ್ (ಬಿಎಸಿ; 1ನಿ, 07.91ಸೆ)–1,  ವಿನಿತಾ ನಯನಾ (ಬಿಎಸಿ; 1ನಿ.09.71ಸೆ)–2, ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್ ಅಕ್ವಾಟಿಕ್ಸ್; 1ನಿ.10.05ಸೆ)–3

400 ಮೀ ಫ್ರೀಸ್ಟೈಲ್: ಅದಿತಿ ಎನ್ ಮೂಲ್ಯಾ (ಬಿಎಸಿ; 4ನಿ, 40.81ಸೆ)–1, ವಿಹಿತಾ ನಯನಾ (ಬಿಎಸಿ; 4ನಿ.47.91ಸೆ)–2, ಬಿ.ಎಸ್. ಜನ್ಯಾ (ಬಿಎಸಿ; 4ನಿ. 51.10ಸೆ)–3

200 ಮೀ ವೈಯಕ್ತಿಕ ಮೆಡ್ಲೆ: ಅದಿತಿ ಎನ್ ಮೂಲ್ಯಾ (ಬಿಎಸಿ; 2ನಿ,37.97ಸೆ)–1, ಸಹನಾ ನಂದಕುಮಾರ್ (ಗೋಲ್ಡನ್ ಫಿನ್ಸ್; 2ನಿ,50.48ಸೆ)–2, ಲಿಪಿಕಾ ದೇವ್ ಜಿ.ಜೆ. (ಸೌಂದರ್ಯಾ ಅಕ್ವಾಟಿಕ್ ಸೆಂಟರ್; 2ನಿ.52.84ಸೆ)–3

100 ಮೀ ಫ್ಲೈ: ನೈಶಾ ಶೆಟ್ಟಿ (ಡಾಲ್ಫಿನ್; 1ನಿ.07.99ಸೆ)–1, ಬಿ.ಎಸ್. ಜನ್ಯಾ (ಬಿಎಸಿ;1ನಿ.10.45ಸೆ)–2, ಅದಿತಿ ಎನ್ ಮೂಲ್ಯಾ (ಬಿಎಸಿ; 1ನಿ.11.60ಸೆ)–3

ಗುಂಪು 2: 100 ಮೀ ಬ್ಯಾಕ್‌ಸ್ಟ್ರೋಕ್: ನೈಶಾ (ಬಿಎಸಿ; 1ನಿ, 09.63ಸೆ)–1, ಮೀನಾಕ್ಷಿ ಮೆನನ್ (ಬಿಎಸಿ; 1ನಿ, 09.67ಸೆ)–2, ತನ್ಮಯ್ ಧರ್ಮೇಶ್ (ಗ್ಲೋಬಲ್ ಸ್ವಿಮ್ ಸೆಂಟರ್; 1ನಿ,16.05ಸೆ)–3

100 ಮೀ ಫ್ಲೈ: ತಾನ್ಯಾ ಎಸ್ (ಡಾಲ್ಫಿನ್; 1ನಿ, 08.77ಸೆ)–1, ಮೀನಾಕ್ಷಿ ಮೆನನ್ (ಬಿಎಸಿ; 1ನಿ,09.68ಸೆ)–2, ರುಚಿ ಭಗತ್ (ಡಾಲ್ಫಿನ್ 1ನಿ, 14.41ಸೆ)–3. 

ಬೆಂಗಳೂರಿನ ಎನ್‌ಎಸಿಯಲ್ಲಿ ಶನಿವಾರ ಆರಂಭವಾದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀಟರ್ಸ್ ಬಟರ್‌ಫ್ಲೈ ಸ್ಕಿನ್ಸ್‌ ವಿಭಾಗದ ವಿಜೇತರು (ಎಡದಿಂದ) ಮಂಡಿಯೂರಿದವರು: ಜನ್ಯಾ ಬಿಎಸ್ ತಿತೀಕ್ಷಾ ಹನುಮಂತರಾಜ್ ಶ್ರೀಗೌರಿ ಹೆಬ್ಬಾರ್ ತಿಸ್ಯಾ ಸೋಣಾರ್.  ಕುಳಿತವರು: ಚರಿತಾ ಫಣೀಂದ್ರನಾಥ್ ನೈಶಾ ಶೆಟ್ಟಿ ರಿಧಿಮಾ ವೀರೇಂದ್ರ ಕುಮಾರ್ ನೀನಾ ವೆಂಕಟೇಶ್

ಬೆಂಗಳೂರಿನ ಎನ್‌ಎಸಿಯಲ್ಲಿ ಶನಿವಾರ ಆರಂಭವಾದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀಟರ್ಸ್ ಬಟರ್‌ಫ್ಲೈ ಸ್ಕಿನ್ಸ್‌ ವಿಭಾಗದ ವಿಜೇತರು (ಎಡದಿಂದ) ಮಂಡಿಯೂರಿದವರು: ಜನ್ಯಾ ಬಿಎಸ್ ತಿತೀಕ್ಷಾ ಹನುಮಂತರಾಜ್ ಶ್ರೀಗೌರಿ ಹೆಬ್ಬಾರ್ ತಿಸ್ಯಾ ಸೋಣಾರ್.  ಕುಳಿತವರು: ಚರಿತಾ ಫಣೀಂದ್ರನಾಥ್ ನೈಶಾ ಶೆಟ್ಟಿ ರಿಧಿಮಾ ವೀರೇಂದ್ರ ಕುಮಾರ್ ನೀನಾ ವೆಂಕಟೇಶ್ 

 –ಪ್ರಜಾವಾಣಿ ಚಿತ್ರ

ಈಜುಪಟುಗಳಿಗೆ ಉತ್ತಮ ವೇದಿಕೆ: ಮಧು ಬಂಗಾರಪ್ಪ

ಸತತ ಎರಡನೇ ವರ್ಷ ಆಯೋಜನೆಗೊಂಡಿರುವ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್ ಅನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಈ  ಸಂದರ್ಭದಲ್ಲಿ ಮಾತನಾಡಿದ ಅವರು ‘ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಶಿಕ್ಷಣ ರಂಗದ ಅಭಿವೃದ್ಧಿಯು ಅಮೋಘವಾಗಿ ಇರಲಿದ್ದು ಹೊಸ ರೂಪ ಸಿಗಲಿದೆ. ಸರ್ಕಾರಿ ಪಬ್ಲಿಕ್ ಶಾಲೆಗಳನ್ನು ಹೆಚ್ಚಿಸಿ ಉತ್ತಮ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲಾಗುವುದು’ ಎಂದರು. ‘ನೆಟ್ಟಕಲ್ಲಪ್ಪನವರು ಮಹಾನ್ ಕ್ರೀಡಾಪ್ರೇಮಿಯಾಗಿದ್ದರು. ಅವರ ಪರಂಪರೆಯನ್ನು ಇಲ್ಲಿ ಮುಂದುವರಿಸುತ್ತಿರುವುದರ ಅಂಗವಾಗಿ ಈ ಈಜುಕೂಟವು ಯಶಸ್ವಿಯಾಗಿದೆ.  ಇದು ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ’ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ದ ಪ್ರಿಂಟರ್ಸ್ ಮೈಸೂರು ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್‌ ಕುಮಾರ್  ಎನ್‌ಎಸಿಯ ನಿರ್ದೇಶಕಿ ಸುಜಾತಾ ತಿಲಕ್‌ ಕುಮಾರ್ ಸಂಗೀತಾ ತಿಲಕಕುಮಾರ್ ಭಾಗ್ಯಲಕ್ಷ್ಮೀ ತಿಲಕ್‌ ಕುಮಾರ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT