ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್ : ಒಲಿಂಪಿಯನ್ ಈಜುಪಟುಗಳ ಆಕರ್ಷಣೆ

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್ ಇಂದಿನಿಂದ
Published 24 ನವೆಂಬರ್ 2023, 16:12 IST
Last Updated 24 ನವೆಂಬರ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಮತ್ತು ಭಾನುವಾರ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆಯಲಿರುವ  ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌‘ನಲ್ಲಿ ರೋಚಕವಾದ ಸ್ಕಿನ್ಸ್‌ ಸ್ಪರ್ಧೆಗಳು ಮತ್ತು ಅಂತರರಾಷ್ಟ್ರೀಯ ಈಜುಪಟುಗಳ ಪೈಪೋಟಿ ಪ್ರಮುಖವಾಗಿವೆ.

ಪದ್ಮನಾಭನಗರದಲ್ಲಿರುವ ಎನ್‌ಇಸಿಯಲ್ಲಿ ಎರಡು ದಿನ ನಡೆಯುವ ಈಜುಕೂಟದಲ್ಲಿ  ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಒಟ್ಟು 250 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಇದು ಎರಡನೇ ವರ್ಷ ಅಯೋಜನೆಯಾಗುತ್ತಿರುವ ಸ್ಪರ್ಧೆಯಾಗಿದೆ. ಅದರಲ್ಲಿ  ಸ್ಕಿನ್ಸ್‌ ಸ್ಪರ್ಧೆಗಳು ಗಮನ ಸೆಳೆಯುವ ನಿರೀಕ್ಷೆ ಇದೆ

ಸ್ಕಿನ್ಸ್ ಎಂದರೆ; ಫೈನಲ್ಸ್‌ನಲ್ಲಿ ಮೂರು ಸುತ್ತುಗಳ ಸ್ಪರ್ಧೆ ನಡೆಸಿ ವಿಜೇತರನ್ನು ನಿರ್ಣಯಿಸಲಾಯಿತು. ಈಜುಪಟುಗಳ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚುವ ಸ್ಪರ್ಧೆ ಇದಾಗಿದೆ. ಹೋದ ಸಲ ಮೊದಲ ಬಾರಿ ಸ್ಕಿನ್ಸ್‌ ನಡೆದಿತ್ತು. ಈ ಸ್ಪರ್ಧೆಗಳು ಯುರೋಪ್ ಮತ್ತು ಅಮೆರಿಕದಲ್ಲಿ ನಡೆಯುವ ಅಂತರರಾಷ್ಟ್ರೀಯ ಈಜು ಲೀಗ್‌ಗಳಲ್ಲಿ ಆಯೋಜನೆಗೊಳ್ಳೂತ್ತವೆ.  ಹೋದ ಬಾರಿ 50 ಮೀ ವಿಭಾಗದ ಸ್ಪರ್ಧೆಗಳನ್ನು ಸ್ಕಿನ್ಸ್‌ ಮಾದರಿಯಲ್ಲಿ ನಡೆಸಲಾಗಿತ್ತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶ್ರೀಹರಿ ನಟರಾಜ್ ಮತ್ತು ಸಜನ್ ಪ್ರಕಾಶ್ ಅವರು ಈ ಬಾರಿಯ ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.  ಈಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿಯೂ ಶ್ರೀಹರಿ ಭಾಗವಹಿಸಿದ್ದರು. ಅವರಲ್ಲದೇ ಇನ್ನೂ ಹಲವು ಅಂತರರಾಷ್ಟ್ರೀಯ ಈಜುಪಟುಗಳು ಕೂಟದಲ್ಲಿ ಭಾಗವಹಿಸುವರು ಎಂದು ಕೇಂದ್ರದ ಮುಖ್ಯಸ್ಥ ಡಾ.ವರುಣ್‌ ನಿಜಾವನ್‌ ತಿಳಿಸಿದ್ದಾರೆ.

ಈಜುಕೋಟದ ನೇರಪ್ರಸಾರ ವೀಕ್ಷಿಸಲು ಯೂಟ್ಯೂಬ್ ಲಿಂಕ್:

https://youtube.com/live/yzEBk8rbV8Q?feature=share

https://youtube.com/live/zrpIDY0Sa5o?feature=share

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT