ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟೆ ಕ್ಯಾಂಪಸ್‌ ತಂಡಗಳ ಆಧಿಪತ್ಯ

ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದ ಜೇಮ್ಸ್ ನೈಸ್ಮಿತ್‌ ಕಪ್‌ ಬ್ಯಾಸ್ಕೆಟ್‌ಬಾಲ್ ಟೂರ್ನಿ
Published 1 ಸೆಪ್ಟೆಂಬರ್ 2023, 16:06 IST
Last Updated 1 ಸೆಪ್ಟೆಂಬರ್ 2023, 16:06 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಕಳದ ನಿಟ್ಟೆ ಕ್ಯಾಂಪಸ್‌ ಪುರುಷರ ಮತ್ತು ಮಹಿಳೆಯರ ತಂಡಗಳು ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಜೇಮ್ಸ್ ನೈಸ್ಮಿತ್‌ ಕಪ್‌ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಅಂತರ ಕಾಲೇಜು ವಿಭಾಗಗಳಲ್ಲಿ ಎರಡನೇ ದಿನವೂ ಪಾರಮ್ಯ ಮುಂದುವರಿಸಿವೆ.

ನಗರದ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ನಾಕೌಟ್ ಹಂತದ ಪಂದ್ಯದಲ್ಲಿ ನಿಟ್ಟೆ ಕ್ಯಾಂಪಸ್ ತಂಡ ಜಯ ಗಳಿಸಿತು. ಮಹಿಳೆಯರ ಲೀಗ್‌ ಪಂದ್ಯದಲ್ಲೂ ನಿಟ್ಟೆ ಕ್ಯಾಂಪಸ್ ಗೆಲುವು ಸಾಧಿಸಿತು. 

ಪುರುಷರ ವಿಭಾಗದ ಯೆನೆಪೋಯ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ನಿಟ್ಟೆ 59–47ರಲ್ಲಿ ಜಯ ಗಳಿಸಿತು. ಸಾಗರ್‌ 23 ಮತ್ತು ಸಲ್ಮಾನ್ 12 ಪಾಯಿಂಟ್‌ಗಳೊಂದಿಗೆ ಮಿಂಚಿದರು. ಯೆನೆಪೋಯ ತಂಡದ ಪರ ಐನುಲ್‌ 23 ಪಾಯಿಂಟ್ ಕಲೆ ಹಾಕಿದರು. 

ಮಹಿಳೆಯರ ಪಂದ್ಯದಲ್ಲಿ ನಿಟ್ಟೆ ಕ್ಯಾಂಪಸ್‌ ತಂಡ ನಿಟ್ಟೆ ವಿಶ್ವವಿದ್ಯಾಲಯ ಎದುರು 37–30ರಲ್ಲಿ ಜಯ ಗಳಿಸಿತು. ಹಂಸ 17, ಹರ್ಷಿತಾ ಮತ್ತು ಹೊನ್ನುಶ್ರೀ ತಲಾ 8 ಪಾಯಿಂಟ್ ಗಳಿಸಿದರು. ನಿಟ್ಟೆ ವಿವಿಗಾಗಿ ಡ್ಯಾನಿಕಾ ಏಕಾಂಗಿ ಹೋರಾಟ ನಡೆಸಿ 23 ಪಾಯಿಂಟ್ ಕಲೆ ಹಾಕಿದರು. ಯೆನೆಪೋಯ ತಂಡ ಸೇಂಟ್ ಅಲೋಶಿಯಸ್ ವಿರುದ್ಧ 19–9ರಲ್ಲಿ ಜಯಿಸಿದರೆ ಸೇಂಟ್‌ ಅಲೋಶಿಯಸ್ ಪಿಯು ಕಾಲೇಜು ತಂಡ ಎನ್‌ಐಟಿಕೆಯನ್ನು 28–8ರಲ್ಲಿ ಮಣಿಸಿತು. ಮೊದಲಾರ್ಧದಲ್ಲಿ 21–4ರ ಮುನ್ನಡೆಯೊಂದಿಗೆ ತಂಡ ಜಯದತ್ತ ಹೆಜ್ಜೆ ಹಾಕಿತ್ತು. 13 ಪಾಯಿಂಟ್‌ಗಳೊಂದಿಗೆ ಆ್ಯಶ್ಲಿನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಹೈಸ್ಕೂಲ್ ಬಾಲಕರ ವಿಭಾಗದ ಲೀಗ್‌ ಪಂದ್ಯಗಳಲ್ಲಿ ಲೂರ್ದ್ಸ್‌ ‘ಬಿ’ ತಂಡ ಸೇಂಟ್ ಅಲೋಶಿಯಸ್ ಮೇನ್‌ ವಿರುದ್ಧ 25–14ರಲ್ಲಿ, ಶಾರದಾ ವಿದ್ಯಾಲಯ ತಂಡ ಪದುವಾ ಶಾಲೆ ವಿರುದ್ಧ 13–4ರಲ್ಲಿ, ಮಣಿಪಾಲ ತಂಡ ಲೂರ್ದ್ಸ್‌ ‘ಎ’ ವಿರುದ್ಧ 20–4ರಲ್ಲಿ, ಪ್ರೆಸಿಡೆನ್ಸಿ ಶಾಲೆ ಸೇಂಟ್ ಅಲೋಶಿಯಸ್ ಎದುರು 23–21ರಲ್ಲಿ ಜಯಿಸಿತು.

ಬಾಲಕಿಯರ ಲೀಗ್‌ನಲ್ಲಿ ಲೂರ್ದ್ಸ್‌ ಸೆಂಟ್ರಲ್ ಸ್ಕೂಲ್‌ 16–2ರಲ್ಲಿ ಸೇಂಟ್ ಆ್ಯಗ್ನೆಸ್ ವಿರುದ್ಧ, ಸೇಂಟ್ ಅಲೋಶಿಯಸ್ ಗೊನ್ಜಾಗ 7–1ರಲ್ಲಿ ಸೇಂಟ್ ಥೆರೆಸಾ ವಿರುದ್ಧ ಗೆಲುವು ಸಾಧಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT