ಸ್ಟಾವೆಂಜರ್ (ಜರ್ಮನಿ): ಸತತ ಎರಡು ಸೋಲುಗಳ ಬಳಿಕ ವಿಶ್ವ ಚಾಂಪಿಯನ್ ಡಿ.ಗುಕೇಶ್ ಕೊನೆಗೂ ಗೆಲುವಿನ ಹಾದಿಗೆ ಮರಳಿದರು. ಗುರುವಾರ 19ನೇ ವರ್ಷಕ್ಕೆ ಕಾಲಿಟ್ಟ ಭಾರತದ ಆಟಗಾರ, ನಾರ್ವೆ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಹಿಕಾರು ನಕಾಮುರ ಅವರನ್ನು ಸೋಲಿಸಿದರು.

ಮೊದಲ ಎರಡು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ (4.5 ಅಂಕ) ಅವರು ಮೂರನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ (6 ಅಂಕ) ಎದುರು ಸೋಲನುಭವಿಸಿದರು.

ಮೊದಲ ಎರಡು ಸುತ್ತುಗಳಲ್ಲಿ ಗುಕೇಶ್ ಕ್ರಮವಾಗಿ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಸ್ವದೇಶದ ಅರ್ಜುನ್ ಕೈಲಿ ಸೋಲನುಭವಿಸಿದ್ದರು. ಮೂರನೇ ಸುತ್ತಿನಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಗುಕೇಶ್ ಅವರು ವಿಶ್ವದ ಶ್ರೇಷ್ಠ ರ್ಯಾಪಿಡ್ ಮತ್ತು ಬ್ಲಿಟ್ಝ್ ಆಟಗಾರರಲ್ಲಿ ಒಬ್ಬರಾದ ನಕಾಮುರಾ (4.5) ಅವರನ್ನು ಸಮಯದ ಒತ್ತಡಕ್ಕೆ ಸಿಲುಕಿಸಿ 42 ನಡೆಗಳಲ್ಲಿ ಗೆದ್ದು ಮೂರು ಅಂಕ ಪಡೆದರು.

ಈ ಟೂರ್ನಿಯಲ್ಲಿ ಇನ್ನೂ ಮೂರು ಸುತ್ತುಗಳಿವೆ.

ಚೀನಾದ ವೀ ಯಿ ಇನ್ನೊಂದು ಪಂದ್ಯದಲ್ಲಿ (2.5) ಇನ್ನೊಂದು ಪಂದ್ಯದಲ್ಲಿ ಕಾರ್ಲ್ಸನ್ (5) ಅವರನ್ನು ಅವರನ್ನು ‘ಆರ್ಮ್ಗೆಡನ್’ (ಟೈಬ್ರೇಕ್)ನಲ್ಲಿ ಸೋಲಿಸಿದರು. ಇವರಿಬ್ಬರ ನಡುವಣ ಕ್ಲಾಸಿಕಲ್ ಪಂದ್ಯ ಡ್ರಾ ಆಗಿತ್ತು.

ಆರು ಆಟಗಾರರ ಟೂರ್ನಿಯಲ್ಲಿ ಕರುವಾನ ಅಗ್ರಸ್ಥಾನದಲ್ಲಿದ್ದರೆ, ಕಾರ್ಲ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಇರಿಗೇಶಿ ಮತ್ತು ನಕಾಮುರ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಗುಕೇಶ್ ಐದನೇ ಹಾಗೂ ವೀ ಯಿ ಕೊನೆಯ ಸ್ಥಾನದಲ್ಲಿದ್ದಾರೆ.

ಜಂಟಿ ಅಗ್ರಸ್ಥಾನದಲ್ಲಿ ಹಂಪಿ:

ಮಹಿಳಾ ವಿಭಾಗದಲ್ಲಿ ಎರಡು ಬಾರಿಯ ವಿಶ್ವ ರ್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ ಮೂರನೇ ಸುತ್ತಿನಲ್ಲಿ ಇರಾನ್ ಸಂಜಾತೆ ಸ್ಪೇನ್ನ ಸಾರಾ ಖಾಡೆಮ್ (2) ಅವರನ್ನು ಸೋಲಿಸಿದರು. ಹಂಪಿ ಮತ್ತು ಉಕ್ರೇನ್ನ ಅನ್ನಾ ಮುಝಿಚುಕ್ ಅವರು ತಲಾ ಆರು ಅಂಕಗಳನ್ನು ಗಳಿಸಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಚೀನಾದ ಜು ವೆನ್ಜುನ್ (4) ಅವರು ಆರ್ಮ್ಗೆಡನ್ನಲ್ಲಿ ಭಾರತದ ಆರ್.ವೈಶಾಲಿಅ ವರನ್ನು ಮಣಿಸದಿರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.