ಪ್ಯಾರಿಸ್ (ಪಿಟಿಐ): ಮೊದಲ ಸಲ ಒಲಿಂಪಿಕ್ಸ್ನಲ್ಲಿ ಕಣಕಿಳಿದಿರುವ ಅಂಕಿತಾ ಭಕತ್, ಅನುಭವಿ ದೀಪಿಕಾ ಕುಮಾರಿ ಅವರನ್ನು ಹಿಂದೆಹಾಕಿ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಗುರುವಾರ 11ನೇ ಸ್ಥಾನ ಗಳಿಸಿ, ಉತ್ತಮ ಸ್ಥಾನ ಪಡೆದ ಭಾರತೀಯ ಬಿಲ್ಗಾರ್ತಿ ಎನಿಸಿದರು. ತಂಡ ವಿಭಾಗದಲ್ಲಿ ಭಾರತ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆಯಿತು.

26 ವರ್ಷದ ಅಂಕಿತಾ 666 ಪಾಯಿಂಟ್ ಗಳೊಡನೆ ಅಗ್ರ ಕ್ರಮಾಂಕದ ಭಾರತೀಯ ಬಿಲ್ಗಾರ್ತಿ ಎನಿಸಿದರು. ಭಜನ್ ಕೌರ್ (22ನೇ ಸ್ಥಾನ, 659 ಪಾಯಿಂಟ್ಸ್) ಮತ್ತು ದೀಪಿಕಾ ಕುಮಾರಿ (23ನೇ ಸ್ಥಾನ, 658 ಪಾಯಿಂಟ್ಸ್) ನಂತರದ ಸ್ಥಾನ ಪಡೆದರು.

ತಂಡ ವಿಭಾಗದಲ್ಲಿ ಭಾರತ 1983 ಪಾಯಿಂಟ್ಗಳೊಡನೆ ನಾಲ್ಕನೇ ಸ್ಥಾನ ಪಡೆಯಿತು. ದಕ್ಷಿಣ ಕೊರಿಯಾ ನಿರೀಕ್ಷೆಯಂತೆ 2046 ಪಾಯಿಂಟ್ಗಳೊಡನೆ ಅಗ್ರಸ್ಥಾನ ಗಳಿಸಿತು. ಚೀನಾ ಎರಡನೇ ಹಾಗೂ ಮೆಕ್ಸಿಕೊ ಮೂರನೇ ಸ್ಥಾನ ಪಡೆದು ಎಂಟರ ಘಟ್ಟಕ್ಕೆ ಮುನ್ನಡೆದವು.

ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ನೇರವಾಗಿ ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆಯುತ್ತವೆ. 5 ರಿಂದ 12ರವರೆಗೆ ಸ್ಥಾನ ಪಡೆದ ತಂಡಗಳು 16ರ ಸುತ್ತಿನಲ್ಲಿ ಆಡಿ ಅರ್ಹತೆ ಪಡೆಯಬೇಕಾಗುತ್ತದೆ.

ಭಾರತ ಕ್ವಾರ್ಟರ್ಫೈನಲ್ ಗೆದ್ದರೆ, ಪ್ರಬಲ ದಕ್ಷಿಣ ಕೊರಿಯಾ ಸವಾಲನ್ನು ಎದುರಿಸಬೇಕಾಗುತ್ತದೆ. ಕೊರಿಯಾ ತಂಡ ಶಕ್ತಿಶಾಲಿಯಾಗಿದ್ದು, ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಸತತ ಒಂಬತ್ತನೇ ಬಾರಿ ಪದಕ ಗೆದ್ದುಕೊಂಡಿತ್ತು.

ವೈಯಕ್ತಿಕ ವಿಭಾಗ– ವಿಶ್ವದಾಖಲೆ: ವೈಯಕ್ತಿಕ ವಿಭಾಗದಲ್ಲಿ ಕೊರಿಯಾದ ಲಿಮ್ ಶಿಹ್ಯೊನ್ ಅವರು 694 ಸ್ಕೋರ್ ಗಳಿಸಿ ವಿಶ್ವದಾಖಲೆ ಸ್ಥಾಪಿಸಿ ಅಗ್ರಸ್ಥಾನ ಗಳಿಸಿದರು ಅದೇ ದೇಶದ ಸುಹ್ಯೋನ್ ನಾಮ್ (688) ಎರಡನೇ ಸ್ಥಾನ ಪಡೆದರು. ಚೀನಾದ ಯಾಂಗ್ ಶಿಯೊಲಿ (673) ಮೂರನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಟಾಟಾ ಅಕಾಡೆಮಿ ಪ್ರತಿನಿಧಿಸುತ್ತಿರುವ ಬಂಗಾಳದ ಅಂಕಿತಾ ಅನಿರೀಕ್ಷಿತ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅನುಭವಿ ದೀಪಿಕಾ ಕ್ವಾಲಿಫಿಕೇಷನ್ ಹಂತದಲ್ಲಿ ಮತ್ತೊಮ್ಮೆ ಎಡವಿ ಕಳಪೆ ಪ್ರದರ್ಶನ ನೀಡಿದರು.

ಅಂಕಿತಾ ಭಾರತೀಯ ಸ್ಪರ್ಧಿಗಳ ಪೈಕಿ ಅಗ್ರಸ್ಥಾನ ಗಳಿಸಿರುವ ಕಾರಣ, ಮಿಶ್ರ ತಂಡ ವಿಭಾಗದಲ್ಲಿ ಮೊದಲ ಬಾರಿ ದೀಪಿಕಾ ಸ್ಪರ್ಧಿಸುವ ಅವಕಾಶ ಕಳೆದು
ಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಅಗ್ರಸ್ಥಾನ ಗಳಿಸುವ ಸ್ಪರ್ಧಿಯ ಜೊತೆ ಅಂಕಿತಾ ಜೊತೆಯಾಗಿ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.