ಸಿಡ್ನಿ: ಪ್ಯಾರಿಸ್ ಒಲಿಂಪಿಕ್ಸ್ ಸಂದರ್ಭದಲ್ಲಿ ಮಾದಕ ವಸ್ತು ಕೊಕೇನ್ ಖರೀದಿಗೆ ಯತ್ನಿಸಿದ್ದ ಆಸ್ಟ್ರೇಲಿಯಾದ ಹಾಕಿ ಆಟಗಾರ ಟಾಮ್ ಕ್ರೇಗ್ ಅವರ ಮೇಲೆ ಆಸ್ಟ್ರೇಲಿಯಾದ ಹಾಕಿಸಂಸ್ಥೆ ಒಂದು ವರ್ಷದ ನಿಷೇಧ ಹೇರಿದೆ.
ಆಗಸ್ಟ್ 7ರಂದು ಒಲಿಂಪಿಕ್ಸ್ ವೇಳೆ, ಕ್ರೇಗ್ ಅವರನ್ನು ಕೊಕೇನ್ ಖರೀದಿಗೆ ಪ್ರಯತ್ನಿಸುವಾಗ ಬಂಧಿಸಲಾಗಿತ್ತು. ಆದರೆ ನಂತರ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಆದರೆ ಅವರ ಹೆಸರು ಬಹಿರಂಗಪಡಿಸಿರಲಿಲ್ಲ.