ಲಾಹೋರ್: ಚೆನ್ನೈನಲ್ಲಿ ಆಯೋಜನೆಗೊಂಡಿರುವ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ (SAAF) ಭಾಗಿಯಾಗಲಿರುವ ಪಾಕಿಸ್ತಾನದ 12 ಕ್ರೀಡಾಪಟುಗಳಿಗೆ ಭಾರತ ರಾಯಭಾರ ಕಚೇರಿ ವೀಸಾ ಮಂಜೂರು ಮಾಡಿದೆ.
ವೀಸಾಗೆ ಶನಿವಾರ ಅನುಮತಿ ದೊರೆತಿದ್ದು, ಆಟಗಾರರು ಚೆನ್ನೈಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ವಾಘಾ ಗಡಿ ಮೂಲಕ ಕೀಡಾಪಟುಗಳನ್ನು ಒಳಗೊಂಡ ತಂಡ ಅಮೃತಸರಕ್ಕೆ ತಲುಪಿದ್ದು, ಅಲ್ಲಿಂದ ಚೆನ್ನೈಗೆ ವಿಮಾನದ ಮೂಲಕ ತೆರಳಲಿದ್ದಾರೆ.
ಈ ಕುರಿತು ಕ್ರೀಡಾಕೂಟ ಆಯೋಜಿಸಿರುವ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಪಾಕಿಸ್ತಾನದ ಜೂನಿಯರ್ ಕ್ರೀಡಾಪಟುಗಳ ತಂಡ ಅಮೃತಸರಕ್ಕೆ ತಲುಪಿದೆ. ಅವರು ಸೆ.11 ರಿಂದ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ’ ಎಂದು ತಿಳಿಸಿದೆ.
ಚೆನ್ನೈನಲ್ಲಿ ಕ್ರೀಡಾಕೂಟ ಸೆ.11 ರಿಂದ ಆರಂಭವಾಗಲಿದ್ದು, 13ರಂದು ಮುಕ್ತಾಯಗೊಳ್ಳಲಿದೆ.