ಗುರುಗ್ರಾಮ: ಹಾಲಿ ಚಾಂಪಿಯನ್ ಭಾರತದ ಖಾಲಿನ್ ಜೋಷಿ, ಪ್ಯಾನಾಸೋನಿಕ್ ಇಂಡಿಯಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.

ನವೆಂಬರ್ 14ರಿಂದ 17ರವರೆಗೆ ಇಲ್ಲಿನ ಕ್ಲಾಸಿಕ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಅಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ₹ 2.85 ಕೋಟಿ (40, 0000 ಅಮೆರಿಕನ್ ಡಾಲರ್) ಬಹುಮಾನ ಮೊತ್ತದ ಏಷ್ಯನ್ ಟೂರ್ ಟೂರ್ನಿ ಇದು.

16 ದೇಶಗಳಿಂದ ಗಾಲ್ಫ್ ಪಟುಗಳು ಭಾಗವಹಿಸಲಿದ್ದಾರೆ. 2011ರಲ್ಲಿ ಆರಂಭವಾದ ಈ ಚಾಂಪಿಯನ್ಷಿಪ್ನಲ್ಲಿ ಯಾರೊಬ್ಬರೂ ಎರಡು ಬಾರಿ ಚಾಂಪಿಯನ್ ಆಗಿಲ್ಲ. ಜೋಷಿ ಈ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.

‘ನನ್ನ ಪ್ರಥಮ ಏಷ್ಯನ್ ಟೂರ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ನನ್ನ ಆಟದಲ್ಲಿ ಧನಾತ್ಮಕ ಅಂಶ ಕಾಣುತ್ತಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ಜೋಷಿ ಹೇಳಿದ್ದಾರೆ.

ಹೋದ ವರ್ಷ ಶ್ರೇಷ್ಠ ಪ್ರದರ್ಶನ ತೋರಿದ್ದ ಜೋಷಿ, ಬಾಂಗ್ಲಾದೇಶದ ಸಿದ್ದೀಕ್ ಉರ್ ರೆಹಮಾನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.