ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್‌: ಕಂಚು ಗೆದ್ದ ಏಳು ತಿಂಗಳ ಗರ್ಭಿಣಿ!

Published : 2 ಸೆಪ್ಟೆಂಬರ್ 2024, 14:56 IST
Last Updated : 2 ಸೆಪ್ಟೆಂಬರ್ 2024, 14:56 IST
ಫಾಲೋ ಮಾಡಿ
Comments

ಪ್ಯಾರಿಸ್‌: ಬ್ರಿಟನ್‌ನ ಏಳು ತಿಂಗಳ ಗರ್ಭಿಣಿ ಜೋಡೆ ಗ್ರಿನ್‌ಹ್ಯಾಮ್ ಅವರು ಮಹಿಳೆಯರ ಆರ್ಚರಿ ವೈಯಕ್ತಿಕ ಕಾಂಪೌಂಡ್‌ ಸ್ಪರ್ಧೆಯಲ್ಲಿ ಕಂಚು ಗೆದ್ದು ದಾಖಲೆ ಬರೆದಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಗರ್ಭಿಣಿ ಅಥ್ಲೀಟ್ ಎಂಬ ಹೆಗ್ಗಳಿಕೆಗೆ 31 ವರ್ಷ ವಯಸ್ಸಿನ ಗ್ರಿನ್‌ಹ್ಯಾಮ್  ಪಾತ್ರವಾಗಿದ್ದಾರೆ ಎಂದು ಪ್ಯಾರಾಲಿಂಪಿಕ್ಸ್‌ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಲಾಗಿದೆ.

ಕಂಚಿನ ಪದಕದ ಸ್ಪರ್ಧೆಯಲ್ಲಿ ಗ್ರಿನ್‌ಹ್ಯಾಮ್ 142-141ರಿಂದ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, ಸ್ವದೇಶದ ಸ್ನೇಹಿತೆಯೂ ಆಗಿರುವ ಫೋಬೆ ಪ್ಯಾಟರ್ಸನ್ ಪೈನ್ ಅವರನ್ನು ಸೋಲಿಸಿದರು.‌

ಗ್ರಿನ್‌ಹ್ಯಾಮ್ ಅವರು ನಾಥನ್ ಮೆಕ್‌ಕ್ವೀನ್ ಅವರೊಂದಿಗೆ ಮಿಶ್ರ ಕಾಂಪೌಂಡ್‌ ಸ್ಪರ್ಧೆಯಲ್ಲಿ ಕ್ವಾರ್ಟರ್-ಫೈನಲ್‌ ಪ್ರವೇಶಿಸಿದ್ದು,  ಎರಡನೇ ಪದಕದ ಬೇಟೆಯಲ್ಲಿದ್ದಾರೆ. ಗ್ರಿನ್‌ಹ್ಯಾಮ್ ಅವರು ಎಡಗೈಯಲ್ಲಿ ಅಂಗವೈಕಲ್ಯ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT