ಪ್ಯಾರಿಸ್: ಭಾರತದ ಬಲರಾಜ್ ಪನ್ವಾರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ರೋಯಿಂಗ್ ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದ ಅಂತಿಮ ‘ಡಿ’ ಸುತ್ತಿನಲ್ಲಿ ಶುಕ್ರವಾರ ಐದನೇ ಸ್ಥಾನ ಹಾಗೂ ಒಟ್ಟಾರೆ 23ನೇ ಸ್ಥಾನ ಪಡೆದರು.
ಹರಿಯಾಣದ 25 ವರ್ಷದ ವಯಸ್ಸಿನ್ ಪನ್ವಾರ್ 7ನಿ.02.37 ಸೆಕೆಗಂಗುಳಲ್ಲಿ ಗುರಿಮುಟ್ಟಿದರು. ಇದು ಪದಕದ ಸುತ್ತು ಆಗಿರಲಿಲ್ಲ. ಇದು ಈ ಕ್ರೀಡೆಗಳಲ್ಲಿ ಅವರು ದಾಖಲಿಸಿದ ಉತ್ತಮ ಅವಧಿ.
ಅವರು ಈ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಸ್ಪರ್ಧಿಯಾಗಿದ್ದಾರೆ. ಇದಕ್ಕೆ ಮೊದಲು, ಮಂಗಳವಾರ ಕ್ವಾರ್ಟರ್‌ಫೈನಲ್ ಹೀಟ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರು. ರೆಪೆಷಾಜ್‌ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಅವರು ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು.
ಫೈನಲ್ ‘ಎ’ ಗುಂಪಿನ ಮೊದಲ ಮೂರು ಸ್ಥಾನ ಪಡೆದವರಿಗೆ ಪದಕಗಳನ್ನು ನೀಡಲಾಗುತ್ತದೆ.