ಪ್ಯಾರಿಸ್: ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು ಫೈನಲ್‌ನಲ್ಲಿ 98–87ರಿಂದ ಆತಿಥೇಯ ಫ್ರಾನ್ಸ್ ತಂಡವನ್ನು ಮಣಿಸಿ, ಸತತ ಐದನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಇದು ಪುರುಷರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೆರಿಕಕ್ಕೆ 17ನೇ ಒಲಿಂಪಿಕ್ ಚಿನ್ನದ ಪದಕವಾಗಿದೆ.
ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನಲ್ಲೂ ಅಮೆರಿಕ ಚಿನ್ನ ಗೆದ್ದುಕೊಂಡಿತು. ಈ ಮೂಲಕ ಸತತ ಎಂಟನೇ ಬಾರಿ ಚಾಂಪಿಯನ್ ಆಯಿತು.
ಭಾನುವಾರ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ 67–66ರಿಂದ ಫ್ರಾನ್ಸ್ ತಂಡವನ್ನು ಮಣಿಸಿತು.