ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Pro Kabaddi League: ಡೆಲ್ಲಿಗೆ ರೋಚಕ ಜಯ

Published : 14 ಫೆಬ್ರುವರಿ 2024, 22:53 IST
Last Updated : 14 ಫೆಬ್ರುವರಿ 2024, 22:53 IST
ಫಾಲೋ ಮಾಡಿ
Comments

ಕೋಲ್ಕತ್ತ: ಪ್ರಮುಖ ರೇಡರ್ ಅಶು ಮಲಿಕ್ (18 ಅಂಕ) ಅವರ ಚಾಣಾಕ್ಷ ಆಟದಿಂದ ದಬಾಂಗ್ ಡೆಲ್ಲಿ ತಂಡ, ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 45–43ರಲ್ಲಿ ಎರಡು ಅಂಕಗಳ ರೋಚಕ ಗೆಲುವು ದಾಖಲಿಸಿತು.

ಇದರೊಂದಿಗೆ ಒಟ್ಟಾರೆ 74 ಅಂಕಗಳಿಸಿದ ದಬಾಂಗ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯಿತು. ಈ ಸೋಲಿನಿಂದ ತಲೈವಾಸ್ ಪ್ಲೇಆಫ್ ಅವಕಾಶ ಕ್ಷೀಣವಾಗಿದೆ. ತಲೈವಾಸ್ ಪರ ನರೇಂದರ್ 18 ಅಂಕ ಗಳಿಸಿದ ತಂಡದ ಹೋರಾಟದಲ್ಲಿ ಮಿಂಚಿದರು.

ಅಲ್ಪ ಸ್ಕೋರುಗಳ ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ 29–26 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಗಳಿಸಿತು. ಪುಣೇರಿ ಪರ ಆಕಾಶ್‌ ಶಿಂಧೆ 10 ಪಾಯಿಂಟ್ಸ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT