ಮುಂಬೈ: ಪ್ರೊ ಕಬಡ್ಡಿ ಲೀಗ್ನಲ್ಲಿ ಆಡಲಿರುವ ಯು ಮುಂಬಾ ತಂಡ, 12ನೇ ಆವೃತ್ತಿಗೆ ಕಳೆದ ಆವೃತ್ತಿಯಲ್ಲಿ ಆಡಿದ್ದ ತಂಡದ ಬಹುತೇಕ ಪ್ರಮುಖರನ್ನು ಉಳಿಸಿಕೊಂಡಿದೆ. ರೈಟ್ಕವರ್ ಡಿಫೆಂಡರ್ ಸುನೀಲ್ ಕುಮಾರ್ ನಾಯಕರಾಗಿ ಮುಂದುವರಿಯಲಿದ್ದಾರೆ.

ಸುನೀಲ್ ಪಿಕೆಎಲ್ ಇತಿಹಾಸದ ಅತಿ ಯಶಸ್ವಿ ನಾಯಕರೆನಿಸಿದ್ದಾರೆ. ಅವರ ಜೊತೆ ಕಳೆದ ಋತುವಿನ ಶೋಧ ಎನಿಸಿರುವ ರಾಘವ್ ಅವರೂ ರೀಟೆನ್ ಆಗಿದ್ದಾರೆ. ಕಳೆದ ಬಾರಿ ‘ಅನ್ಸೋಲ್ಡ್’ ಆಗಿದ್ದ ಅವರು ಬದಲಿ ಆಟಗಾರನಾಗಿ ಮುಂಬಾ ತಂಡ ಸೇರಿಕೊಂಡಿದ್ದರು. 68 ರೇಡ್ ಪಾಯಿಂಟ್ ಮತ್ತು 11 ಟ್ಯಾಕಲ್ ಪಾಯಿಂಟ್ ಪಡೆದ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆದರಲ್ಲದೇ, ಅಭಿಮಾನಿಗಳ ನೆಚ್ಚಿನ ಆಟಗಾರ ಎನಿಸಿದರು.

ಈ ಬಾರಿಯ ಪಿಕೆಎಲ್ ಹರಾಜು ಮೇ 31 ರಿಂದ ಜೂನ್ 1ರವರೆಗೆ ನಡೆಯಲಿದೆ. ರಕ್ಷಣೆ ಆಟಗಾರರಾದ ಲೋಕೇಶ್ ಘೊಸಿಲ್ಯ, ದೀಪಕ್ ಕುಂದು ಮತ್ತು ಸನ್ನಿ ಅವರು ಅಜಿತ್ ಜೊತೆ ಉಳಿಸಿಕೊಂಡ ಎನ್ಐಪಿ (ನ್ಯೂ ಯಂಗ್ ಪ್ಲೇಯರ್ಸ್) ಆಟಗಾರರಲ್ಲಿ ಒಳಗೊಂಡಿದ್ದಾರೆ.

ಮುಂಬೈ ಕಳೆದ ವರ್ಷ ಪ್ಲೇಆಫ್ನಲ್ಲಿ ಆಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.