ಪಟ್ನಾ: ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ತಮಿಳ್ ತಲೈವಾಸ್ ತಂಡವು ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಯು.ಪಿ.ಯೋಧಾ ಸವಾಲು ಎದುರಿಸಲಿದೆ.

ಅಜಯ್ ಠಾಕೂರ್ ಮುಂದಾಳತ್ವದ ತಲೈವಾಸ್ ಈ ಬಾರಿ ನಾಲ್ಕು ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಗೆದ್ದಿದೆ. ಹಿಂದಿನ ಎರಡು ಪಂದ್ಯಗಳಲ್ಲೂ ಸೋತಿದೆ. ಯೋಧಾ ಕೂಡ ಇಷ್ಟೇ ಪಂದ್ಯಗಳನ್ನು ಆಡಿದೆ. ಆದರೆ ಜಯಿಸಿರುವುದು ಒಂದರಲ್ಲಿ ಮಾತ್ರ. ಈ ತಂಡ ಪಟ್ಟಿಯಲ್ಲಿ ಹತ್ತನೇ ಸ್ಥಾನ ಹೊಂದಿದೆ.

ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಹೀಗಾಗಿ ಪಾಟಲೀಪುತ್ರ ಕ್ರೀಡಾ ಸಂಕೀರ್ಣದಲ್ಲಿ ನಡೆಯುವ ಹೋರಾಟ ಕುತೂಹಲದ ಗಣಿಯಾಗಿದೆ.

ಇಂದಿನ ಪಂದ್ಯಗಳು

ಯು.ಪಿ.ಯೋಧಾ–ತಮಿಳ್ ತಲೈವಾಸ್

ಆರಂಭ: ರಾತ್ರಿ 7.30.

ಪಟ್ನಾ ಪೈರೇಟ್ಸ್–ಹರಿಯಾಣ ಸ್ಟೀಲರ್ಸ್

ಆರಂಭ: ರಾತ್ರಿ 8.30.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.