ಚೆನ್ನೈ: ನಾಯಕ ಅಜಯ್ ಠಾಕೂರ್ ಅವರ ಅಮೋಘ ರೈಡಿಂಗ್‌ನ ನೆರವಿನಿಂದ ತಮಿಳ್ ತಲೈವಾಸ್ ತಂಡದವರು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಆರನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’ ವಲಯದ ಪಂದ್ಯದಲ್ಲಿ ತಲೈವಾಸ್ 42–26 ಪಾಯಿಂಟ್ಸ್‌ನಿಂದ ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಪರಾಭವಗೊಳಿಸಿತು.

ತಲೈವಾಸ್ ತಂಡದ ನಾಯಕ ಅಜಯ್ 14 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅಮಿತ್ ಹೂಡಾ ಟ್ಯಾಕ್ಲಿಂಗ್‌ನಲ್ಲಿ ಮಿಂಚಿದರು.

ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ತಲೈವಾಸ್ ಆರಂಭದಿಂದಲೇ ಚುರುಕಿನ ಆಟ ಆಡಿತು. ಸುರ್ಜೀತ್ ಸಿಂಗ್ ರೈಡಿಂಗ್‌ನಲ್ಲಿ ಮೋಡಿ ಮಾಡಿದರು.

ಕರ್ನಾಟಕದ ಜೆ.ದರ್ಶನ್, ಅನುಭವಿಗಳಾದ ಜಸ್ವೀರ್ ಸಿಂಗ್ ಮತ್ತು ಮಂಜೀತ್ ಚಿಲ್ಲಾರ್ ಅವರು ಎದುರಾಳಿ ರೈಡರ್‌ಗಳನ್ನು ಅಮೋಘ ರೀತಿಯಲ್ಲಿ ಹಿಡಿದು ತವರಿನ ಅಭಿಮಾನಿಗಳನ್ನು ರಂಜಿಸಿದರು.

ಪಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್ ಮತ್ತು ಮಂಜೀತ್ ಅವರು ರೈಡಿಂಗ್‌ನಲ್ಲಿ ಮಿಂಚಿದರು. ಆದರೆ ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಎಡವಟ್ಟುಗಳು ಈ ತಂಡದ ಗೆಲುವಿನ ಕನಸಿಗೆ ಮುಳುವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.