ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಯು ಮುಂಬಾ- ತೆಲುಗು ಟೈಟನ್ಸ್‌ ಪಂದ್ಯ ರೋಚಕ ಟೈ

Published 20 ಫೆಬ್ರುವರಿ 2024, 20:37 IST
Last Updated 20 ಫೆಬ್ರುವರಿ 2024, 20:37 IST
ಅಕ್ಷರ ಗಾತ್ರ

ಪಂಚಕುಲಾ: ನಾಯಕ ಪವನ್‌ ಕುಮಾರ್‌ ಸೆಹ್ರಾವತ್  ಅವರ ಸೂಪರ್ ರೈಡ್‌ನಿಂದ ತೆಲುಗು ಟೈಟನ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇಆವೃತ್ತಿಯಲ್ಲಿ ಯು ಮುಂಬಾ ವಿರುದ್ಧ ರೋಚಕ ಟೈ ಸಾಧಿಸಿ ಅಭಿಯಾನ ಕೊನೆಗೊಳಿಸಿತು. 

ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯ ಲೀಗ್‌ ಪಂದ್ಯದಲ್ಲಿ 45–45ರಿಂದ ಸಮಬಲ ಸಾಧಿಸಿದವು. ಮುಂಬಾ ಒಟ್ಟಾರೆ 46 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಿದರೆ, ಟೈಟನ್ಸ್ 21 ಅಂಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು. 

ಮುಂಬಾ ಪರ ಅಮಿರ್ ಮೊಹಮದ್ ಸೂಪರ್ ಟೆನ್ ಸಾಧನೆ ಮಾಡಿದರು. ಇವರಿಗೆ ಸಹ ಆಟಗಾರ ಗುಮಾನ್ ಸಿಂಗ್ (8 ಅಂಕ) ಬೆಂಬಲ ನೀಡಿದರು. ಟೈಟನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ಪವನ್‌ ಕುಮಾರ್‌ ಸೆಹ್ರಾವತ್ (14 ಅಂಕ) ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಪಂದ್ಯದ ಆರಂಭದಲ್ಲಿ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಪವನ್‌ ಅವರ ದಾಳಿಯ ಜತೆಗೆ ಸಂಘಟಿತ ಪ್ರದರ್ಶನ ನೀಡಿದ ತೆಲುಗು ಟೈಟನ್ಸ್‌ 12ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್‌ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಗುಮಾನ್‌ ಸಿಂಗ್‌ ಅವರ ಆಕರ್ಷಕ ರೇಡ್‌ನಿಂದ ಮುಂಬಾ ವಿರಾಮಕ್ಕೆ 19-19 ರಿಂದ ಸಮಬಲ ಸಾಧಿಸಿತು. 

ದ್ವಿತೀಯಾರ್ಧದಲ್ಲಿ 29–21 ರಿಂದ ಮುನ್ನಡೆಯಲ್ಲಿದ್ದ ಮುಂಬಾ, ಟೈಟನ್ಸ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿತು.   

ಆದರೆ, ಆಮಿರ್‌ ಮೊಹಮ್ಮದ್‌ ಅವರ ಅತ್ಯುತ್ತಮ ರೇಡಿಂಗ್‌ ಹಾಗೂ ಹೊಂದಾಣಿಕೆ ಆಟದಿಂದ 36ನೇ
ನಿಮಿಷದಲ್ಲಿ39-35ರಲ್ಲಿ ಟೈಟನ್ಸ್‌ ವಿರುದ್ಧ ಮೇಲುಗೈ ಸಾಧಿಸಿತು. ಸೋಲು ತಪ್ಪಿಸಲು ಟೈಟನ್ಸ್‌ ಕೊನೆಯವರೆಗೂ ಹೋರಾಟ ನಡೆಸಿತು.

ಕೊನೆಯ ರೇಡ್‌ ನಡೆಸಿದ ಪವನ್ ಅವರು ಆಮಿರ್‌ ಮೊಹಮ್ಮದ್‌ ಅವರನ್ನು ಔಟ್‌ ಮಾಡುವ ಮೂಲಕ ಮುಂಬಾ ತಂಡವನ್ನು ಆಲೌಟ್‌ ಮಾಡಿದರು. ಹೀಗಾಗಿ ಪಂದ್ಯ 45-45 ಅಂಕಗಳಿಂದ ರೋಚಕವಾಗಿ ಟೈ ಆಯಿತು.

ಪವನ್ ಸೂಪರ್ ಟೆನ್‌ ಸಾಧನೆಯೊಂದಿಗೆ ಈ ಟೂರ್ನಿಯಲ್ಲಿ 200 ರೇಡಿಂಗ್ ಪಾಯಿಂಟ್ಸ್ ಕಲೆ ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT