ಚೆನ್ನೈ: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಚೆನ್ನೈ ಸ್ಪಾರ್ಟನ್ಸ್ ತಂಡದವರು ಪ್ರೊ ವಾಲಿಬಾಲ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್ನಲ್ಲಿ ಚೆನ್ನೈ 16–14, 9–15, 10–15, 15–8, 15–13ರಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು ಸೋಲಿಸಿತು.

ಶುಕ್ರವಾರ ನಡೆಯುವ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಚೆನ್ನೈ ತಂಡ ಕ್ಯಾಲಿಕಟ್ ಹೀರೋಸ್ ಎದುರು ಪೈಪೋಟಿ ನಡೆಸಲಿದೆ.

ಚೆನ್ನೈ ತಂಡದ ರುಸ್ಲಾನ್ಸ್ ಸೊರೊಕಿನ್ಸ್ ಮೋಡಿ ಮಾಡಿದರು. ಅವರು ಒಟ್ಟು 17 ಪಾಯಿಂಟ್ಸ್ ಕಲೆಹಾಕಿದರು. ಸ್ಪೈಕ್ಸ್ಗಳ ಮೂಲಕವೇ 15 ಪಾಯಿಂಟ್ಸ್ ಹೆಕ್ಕಿದ್ದು ವಿಶೇಷ.

ಕೊಚ್ಚಿ ತಂಡದ ಮನು ಜೋಸೆಫ್ ಕೂಡಾ 17 ಪಾಯಿಂಟ್ಸ್ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.