ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಪುಣೇರಿ ಪಲ್ಟನ್‌ಗೆ ಚೊಚ್ಚಲ ಕಿರೀಟ

ಹೋರಾಟ ತೋರಿದ ಹರಿಯಾಣ ಸ್ಟೀಲರ್ಸ್‌
Published 1 ಮಾರ್ಚ್ 2024, 18:42 IST
Last Updated 1 ಮಾರ್ಚ್ 2024, 18:42 IST
ಅಕ್ಷರ ಗಾತ್ರ

ಹೈದರಾಬಾದ್‌: ಹೈದರಾಬಾದ್‌: ಪಂಕಜ್‌ ಮೋಹಿತೆ (9 ಪಾಯಿಂಟ್‌) ಅವರ ಅಮೋಘ ರೈಡಿಂಗ್ ಜತೆಗೆ ಸಾಂಘಿಕ ಹೋರಾಟ ಕಾಯ್ದುಕೊಂಡ ಪುಣೇರಿ ಪಲ್ಟನ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ಫೈನಲ್‌ನಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಮೂರು ಪಾಯಿಂಟ್‌ ಗಳಿಂದ ಸೋಲಿಸಿ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಬಾಳೆವಾಡಿಯ ಗಚ್ಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಮಿಂಚಿನ ಆಟವಾಡಿದ ಪುಣೇರಿ 28-25 ಪಾಯಿಂಟ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿ ವಿಜಯೋತ್ಸವ ಆಚರಿಸಿತು. ಟ್ರೋಫಿಯೊಂದಿಗೆ ₹3 ಕೋಟಿ ಬಹುಮಾನ ಮೊತ್ತವನ್ನು ತನ್ನದಾಗಿಸಿಕೊಂಡಿತು. ಮೊದಲ ಸಲ ಫೈನಲ್‌ ಪ್ರವೇಶಿಸಿದ್ದ ಹರಿಯಾಣ ₹1.8 ಕೋಟಿ ಬಹುಮಾನದೊಂದಿಗೆ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಎದುರು ಮುಗ್ಗರಿಸಿದ್ದ ಪಲ್ಟನ್‌, ಈ ಬಾರಿ ಯಾವುದೇ ತಪ್ಪೆಸಗದೇ ಪಂದ್ಯದುದ್ದಕ್ಕೂ ಮುನ್ನಡೆ ಕಾಪಾಡಿಕೊಂಡಿತ್ತು. ಪುಣೇರಿ ಪರ ಪಂಕಜ್‌ ಅಲ್ಲದೆ, ಮೋಹಿತ್‌ ಗೋಯೆತ್‌ (5), ಗೌರವ್‌ ಖತ್ರಿ (4) ಮತ್ತು ಅಸ್ಲಾಮ್‌ (4) ಉತ್ತಮ ಪ್ರದರ್ಶನ ನೀಡಿದರು. ಹರಿಯಾಣ ಪರ ರೈಡರ್ ಶಿವಂ ಪತಾರೆ (6) ಗರಿಷ್ಠ ಪಾಯಿಂಟ್‌ ಗಳಿಸಿದರು.

ಕರ್ನಾಟಕದ ಬಿ.ಸಿ. ರಮೇಶ್‌ ಗರಡಿಯಲ್ಲಿ ಪಳಗಿರುವ ಪುಣೇರಿ ಮೊದಲ ಅವಧಿಯಲ್ಲಿ 13–10ರಲ್ಲಿ ಮೂರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿ ಆತ್ಮವಿಶ್ವಾಸದಲ್ಲಿತ್ತು. ಉತ್ತರಾರ್ಧದಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. 23ನೇ ನಿಮಿಷದಲ್ಲಿ ಸ್ಟೀಲರ್ಸ್‌ ತಂಡವನ್ನು ಮೊದಲ ಬಾರಿ ಆಲೌಟ್‌ ಮಾಡಿ ಮುನ್ನಡೆಯನ್ನು 18-11ಕ್ಕೆ ಹಿಗ್ಗಿಸಿದರು. ‌

35ನೇ ನಿಮಿಷದ ವೇಳೆಗೆ 25-19ರಲ್ಲಿಅಂತರ ಕಾಯ್ದುಕೊಂಡ ಪುಣೇರಿ, ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಇನ್ನೊಂದೆಡೆ ಸ್ಟೀಲರ್ಸ್‌ ಪಾಯಿಂಟ್ ಹೆಚ್ಚಿಸಲು
ಪ್ರಯತ್ನಹಾಕಿತು. ಸಬ್‌ಸ್ಟಿಟ್ಯೂಟ್‌ ಸಿದ್ಧಾರ್ಥ ದೇಸಾಯಿ ಕಣಕ್ಕಿಳಿದು ನಾಲ್ಕು ಪಾಯಿಂಟ್ಸ್‌ ಗಳಿಸಿದ್ದು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT