ಬೀಜಿಂಗ್: ಭಾರತದ ಕುಸ್ತಿಪಟು ರಿತು ಪೋಗಟ್ ಅವರು ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಷಿಪ್‌ನ ತಮ್ಮ ಪದಾರ್ಪಣೆಯ ಪಂದ್ಯದಲ್ಲಿ ಜಯದ ಆರಂಭ ಮಾಡಿದರು.

ಇಲ್ಲಿ ನಡೆದ ಬೌಟ್‌ನಲ್ಲಿ ರಿತು ದಕ್ಷಿಣ ಕೊರಿಯಾದ ನಮ್ ಹೀ ಕಿಮ್ ವಿರುದ್ಧ ತಾಂತ್ರಿಕ ನಾಕೌಟ್ ಆಧಾರದಲ್ಲಿ ಜಯಿಸಿದರು.

‘ನನ್ನ ಸಹೋದರಿಯರು ಮತ್ತು ಕುಟುಂಬಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಇಂದಿನ ಗೆಲುವು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ಒನ್ ಆಟಂವೇಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದು ಭಾರತಕ್ಕೆ ಕಾಣಿಕೆ ನೀಡುವುದೇ ನನ್ನ ಗುರಿ. ಅದಕ್ಕಾಗಿಯೇ ಎ. ಆರ್. ರೆಹಮಾನ್ ಅವರು ಸಂಗೀತ ಸಂಯೋಜಿಸಿರುವ ವಂದೇ ಮಾತರಂ ಗೀತೆಯನ್ನು ನನ್ನ ವಾಕ್ ಔಟ್ ಗೀತೆಯನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ರಿತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.