ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಸಿಲಿಂಡರ್ ಸ್ಫೋಟ ಪ್ರಕರಣ: ನಿಯಮ ಪಾಲನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸೂಚನೆ

Published 9 ಡಿಸೆಂಬರ್ 2023, 18:32 IST
Last Updated 9 ಡಿಸೆಂಬರ್ 2023, 18:32 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಕರ್ಣಿಸಿಂಗ್ ರೇಂಜ್‌ನಲ್ಲಿ ಏರ್ ಪಿಸ್ತೂಲ್ ಸಿಲಿಂಡರ್ ಸ್ಫೋಟಗೊಂಡು ರಾಷ್ಟ್ರೀಯ ಶೂಟಿಂಗ್ ಪಟು ಗಾಯಗೊಂಡ ಬೆನ್ನಲ್ಲೇ 10 ವರ್ಷಕ್ಕಿಂತ ಹಳೆಯದಾದ ಏರ್ ಸಿಲಿಂಡರ್‌ಗಳನ್ನು ಬಳಸದಂತೆ ಭಾರತೀಯ ಕ್ರೀಡಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. 

ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮತ್ತು ಕರ್ಣಿಸಿಂಗ್ ರೇಂಜ್‌ಗಳಲ್ಲಿ ತರಬೇತಿ ಪಡೆಯುವ ಶೂಟರ್‌ಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.‌

ಡಿ.2ರಂದು 10 ಮೀಟರ್‌ ಏರ್‌ ಪಿಸ್ತೂಲ್‌ ಸಿಲಿಂಡರ್‌ಗೆ ಕಂಪ್ರೆ‌ಸ್ಡ್‌ ಏರ್ ತುಂಬಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಈ ವೇಳೆ ತರಬೇತಿ ಪಡೆಯುತ್ತಿದ್ದ ವಾಯುಪಡೆ ಅಧಿಕಾರಿ ಪುಷ್ಪೇಂದರ್ ಕುಮಾರ್ ಅವರ ಎಡಗೈ ಹೆಬ್ಬೆರಳಿಗೆ ತೀವ್ರ ಗಾಯವಾಗಿತ್ತು. ಭೋಪಾಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಾಗಿ ಅವರು ಅಭ್ಯಾಸ ನಡೆಸುತ್ತಿದ್ದರು. ಅವರನ್ನು ಸೇನೆಯ ಆರ್. ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT