ಬೆಂಗಳೂರು: ಕರ್ನಾಟಕದ ಸಮರ್ಥ್ ಜಗದೀಶ ರಾವ್ ಅವರು, ಅರ್ಮೇನಿಯಾದ ಗ್ಯುಮ್ರಿಯಲ್ಲಿ ಶನಿವಾರ ಮುಕ್ತಾಯಗೊಂಡ 23ನೇ ಐಪಿಸಿಎ (ದೈಹಿಕ ನ್ಯೂನತೆಯುಳ್ಳವರ) ವಿಶ್ವ ವೈಯಕ್ತಿಕ ಚೆಸ್ ಚಾಂಪಿಯನ್ಷಿಪ್ನ ವೀಲ್ ಚೇರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಹೊನ್ನಾವರದ ಸಮರ್ಥ್ 9 ಸುತ್ತುಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿದ್ದರು. ಎಂಟು ದಿನಗಳ (ಜುಲೈ 20 ರಿಂದ 27) ಟೂರ್ನಿಯಲ್ಲಿ ಸಮರ್ಥ್ ತನಗಿಂತ ಹೆಚ್ಚು ರೇಟಿಂಗ್ ಹೊಂದಿರುವ ಮೂವರು ಆಟಗಾರರನ್ನು ಮಣಿಸಿದ್ದಾರೆ. ಈ ಟೂರ್ನಿಯಿಂದ 38 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ ಒಟ್ಟು ರೇಟಿಂಗ್ ಅನ್ನು 1835ಕ್ಕೆ ಹೆಚ್ಚಿಸಿದ್ದಾರೆ.

ಸಮರ್ಥ್, ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ್ ರಾವ್ ಮತ್ತು ವಿನುತಾ ಭಟ್ ಅವರ ಪುತ್ರ.

ಅರ್ಮೇನಿಯಾದ ಟೂರ್ನಿಯಲ್ಲಿ ಭಾರತದಿಂದ ಐವರು ಭಾಗವಹಿಸಿದ್ದರು. ತಮಿಳುನಾಡಿನ ಶೆರೋನ್ ರಾಕೇಲ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.