ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಧಾನ ಸುತ್ತಿಗೆ ಸಮೀರ್‌, ಅಶ್ಮಿತಾ

Published 30 ಮೇ 2023, 13:58 IST
Last Updated 30 ಮೇ 2023, 13:58 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಭಾರತದ ಸಮೀರ್ ವರ್ಮಾ, ಕಿರಣ್‌ ಜಾರ್ಜ್‌ ಮತ್ತು ಅಶ್ಮಿತಾ ಚಲಿಹಾ ಅವರು ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿ ಥಾಯ್ಲೆಂಡ್‌ ಓಪನ್‌ ಸೂಪರ್‌–500 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಿದರು.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಸಮೀರ್‌ 21–12, 21–17 ರಲ್ಲಿ ಮಲೇಷ್ಯಾದ ಯಿಹೊ ಸೆಂಗ್‌ ಜೊಯೆ ಅವರನ್ನು ಮಣಿಸಿದರು. ಮೊದಲ ಎರಡು ಪಂದ್ಯಗಳಲ್ಲಿ ಅವರಿಗೆ ‘ಬೈ’ ಲಭಿಸಿತ್ತು. 28 ವರ್ಷದ ಸಮೀರ್‌ ಅವರು ಹಲವು ಸಮಯಗಳ ಬಿಡುವಿನ ಬಳಿಕ ಅಂತರರಾಷ್ಟ್ರೀಯ ಟೂರ್ನಿಗೆ ಪುನರಾಗಮನ ಮಾಡಿದ್ದಾರೆ.

ಬುಧವಾರ ನಡೆಯಲಿರುವ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೊಹಾನ್ಸೆನ್‌ ವಿರುದ್ಧ ಪೈಪೋಟಿ ನಡೆಸುವರು.

2022ರ ಒಡಿಶಾ ಓಪನ್‌ ವಿಜೇತ ಕಿರಣ್‌ ಅವರು ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ 21–14, 21–18 ರಲ್ಲಿ ಭಾರತದ ಕಾರ್ತಿಕ್‌ ಗುಲ್ಶನ್‌ ಕುಮಾರ್‌ ವಿರುದ್ದ ಗೆದ್ದರೆ, ಎರಡನೇ ಸುತ್ತಿನಲ್ಲಿ 21–10, 21–14 ರಲ್ಲಿ ಕೊರಿಯಾದ ಜೆಯೊನ್ ಹ್ಯೋಕ್‌ ಜಿನ್‌ ಅವರನ್ನು ಮಣಿಸಿದರು.

ಮಹಿಳೆಯರ ಸಿಂಗಲ್ಸ್‌ನ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಅಶ್ಮಿತಾ 21–19, 21–11 ರಲ್ಲಿ ಎಸ್ಟೋನಿಯದ ಕ್ರಿಸ್ಟಿನ್ ಕೂಬಾ ವಿರುದ್ಧ ಗೆದ್ದರು. ಮೊದಲ ಪಂದ್ಯದಲ್ಲಿ ಅವರು 21-16, 13-21, 21-19 ರಲ್ಲಿ ಭಾರತದ ಉನ್ನತಿ ಹೂಡಾ ಅವರನ್ನು ಪರಾಭವಗೊಳಿಸಿದ್ದರು.

ಅಶ್ಮಿತಾ ಅವರು ಮೊದಲ ಸುತ್ತಿನಲ್ಲಿ ಭಾರತದವರೇ ಆದ ಮಾಳವಿಕಾ ಬನ್ಸೋಡ್‌ ಅವರ ಸವಾಲು ಎದುರಿಸುವರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನೇರವಾಗಿ ಪ್ರಧಾನ ಹಂತದಲ್ಲಿ ಸ್ಥಾನ ಪಡೆದಿರುವ ಬಿ.ಸಾಯಿ ಪ್ರಣೀತ್‌ ಮತ್ತು ಮಿಥುನ್‌ ಮಂಜುನಾಥ್‌ ಅವರು ಮೊದಲ ಸುತ್ತಿನಲ್ಲಿ ಕ್ರಮವಾಗಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಹಾಗೂ ಥಾಯ್ಲೆಂಡ್‌ನ ಕುನ್ಲಾವತ್‌ ವಿತಿದ್‌ಸರನ್‌ ವಿರುದ್ಧ ಸೆಣಸಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT